ವಿಜಯಪುರ-ಬೆಂಗಳೂರು ಎಸಿ ವೋಲ್ವೋ ಬಸ್ ಸಂಚಾರ

0
12

ಬೆಂಗಳೂರು: ವಿಜಯಪುರ-ಬೆಂಗಳೂರು ಎಸಿ ವೋಲ್ವೋ ಬಸ್ ಸಂಚಾರಕ್ಕೆ ಸಚಿವ ಎಂ. ಬಿ. ಪಾಟೀಲ ನಿನ್ನೆ ದಿನ ಹಸಿರು ನಿಶಾನೆ ತೋರಿಸಿ ಸಂಚಾರಕ್ಕೆ ಚಾಲನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಜಯಪುರ ಘಟಕದಿಂದ ನೂತನವಾಗಿ ವಿಜಯಪುರ-ಬೆಂಗಳೂರು ಎಸಿ ವೋಲ್ವೋ ಬಸ್ ಸೇವೆ ಆರಂಭಿಸಿದ್ದು, ನಿನ್ನೆ ದಿನ ಹಸಿರು ನಿಶಾನೆ ತೋರಿಸಿ ಸಂಚಾರಕ್ಕೆ ಚಾಲನೆ ನೀಡಿದೆ. ಈ ವೇಳೆ ಸಂಸದ ರಮೇಶ ಜಿಗಜಿಣಗಿ, SP ಋಷಿಕೇಶ ಸೋನಾವಣೆ, DC ಟಿ. ಭೂಬಾಪಲನ್, ZP CEO ಋಷಿ ಆನಂದ್ ಮಹಾನಗರ ಪಾಲಿಕೆಯ ನೂತನ ಮೇಯರ್, ಉಪಮೇಯರ್ ಮೊದಲಾದವರು ಉಪಸ್ಥಿತರಿದ್ದರು ಎಂದಿದ್ದಾರೆ.

Previous articleಮರಾಠ ಮೀಸಲಾತಿಗೆ ಮಹಾರಾಷ್ಟ್ರ ಸರ್ಕಾರ ಅಸ್ತು
Next articleಧರಣಿ ಕೂತ ರಾಜ್ಯಪಾಲರು