ವಿಕಸಿತ ಭಾರತಕ್ಕೆ ಈಶಾನ್ಯ ರಾಜ್ಯಗಳ ಪ್ರಗತಿ ಅಗತ್ಯ

ನವದೆಹಲಿ: ಭಾರತ-ಆಸೀಯಾನ್ ನಡುವಿನ ವಾಣಿಜ್ಯ ವಹಿವಾಟು ಮುಂದಿನ ದಿನಗಳಲ್ಲಿ 200 ಶತಕೋಟಿ ಡಾಲರ್ ಗ ತಲುಪಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳೀದ್ದಾರೆ.
ಭಾರತ್ ಮಂಟಪದಲ್ಲಿಂದು ಉದಯೋನ್ಮುಖ ಈಶಾನ್ಯ ಹೂಡಿಕೆದಾರರ ಶೃಂಗಸಭೆ ಉದ್ಘಾಟಿಸಿ ಮಾತನಾಡಿ, ಇಡೀ ವಿಶ್ವದಲ್ಲಿ ಭಾರತ ವೈವಿದ್ಯತೆಗೆ ಹೆಸರಾಗಿದ್ದು, ಭಾರತದಲ್ಲಿ ಈಶಾನ್ಯ ಪ್ರಾಂತ್ಯ ವೈವಿದ್ಯತೆಯಿಂದ ಖ್ಯಾತಿಯಾಗಿದೆ. ಕಲೆ, ಸಂಸ್ಕೃತಿ, ಜವಳಿ, ಪ್ರವಾಸೋದ್ಯಮ, ಕ್ರೀಡೆ, ಕೌಶಲ್ಯಗಳಿಂದ ಈಶಾನ್ಯ ಭಾರತ ಗಮನ ಸೆಳೆಯುತ್ತಿದೆ. ಈ ಪ್ರಾಂತ್ಯದಲ್ಲಿ ಉದ್ಯಮಗಳ ಬೆಳವಣಿಗೆಗೆ ಅಪಾರ ಅವಕಾಶವಿದೆ. ಕಳೆದ 11 ವರ್ಷಗಳಲ್ಲಿ ಈ ಭಾಗದಲ್ಲಿ ಮೂಲ ಸೌಕರ್ಯ ಹೆಚ್ಚಿಸಲಾಗಿದ್ದು, ಹೂಡಿಕೆದಾರರಲ್ಲಿ ಉತ್ಸಾಹ ಹೆಚ್ಚಿದೆ. ಕಳೆದೊಂದು ದಶಕದಲ್ಲಿ 11 ಸಾವಿರ ಕಿಲೋ ಮೀಟರ್ ಉದ್ದದ ಹೆದ್ದಾರಿಯನ್ನು ನಿರ್ಮಿಸಲಾಗಿದ್ದು, ವಿಮಾನ ನಿಲ್ದಾಣಗಳ ಸಂಖ್ಯೆ ಎರಡು ಪಟ್ಟು ಹೆಚ್ಚಿದೆ. ಭಾರತ-ಆಸೀಯಾನ್ ನಡುವಿನ ವಾಣಿಜ್ಯ ವಹಿವಾಟು ಮುಂದಿನ ದಿನಗಳಲ್ಲಿ 200 ಶತಕೋಟಿ ಡಾಲರ್ ಗ ತಲುಪಲಿದ್ದು, ಇದಕ್ಕೆ ಈಶಾನ್ಯ ಭಾರತ ಪ್ರಮುಖವಾಗಿದೆ, ಎರಡು ದಿನಗಳ ಕಾಲ ನಡೆಯುವ ಈ ಶೃಂಗಸಭೆಯು ಈಶಾನ್ಯ ಪ್ರದೇಶವನ್ನು ಅವಕಾಶಗಳ ನೆಲೆಯಾಗಿ ಬಿಂಬಿಸುವ ಜತೆಗೆ ಜಾಗತಿಕ ಮತ್ತು ದೇಶೀಯ ಹೂಡಿಕೆ ಆಕರ್ಷಿಸುವ ಗುರಿ ಹೊಂದಿದೆ ಎಂದರು.