ವಾಲ್ಮೀಕಿ ನಿಗಮದ ಹಣ ಗೋಣಿ ಚೀಲದಲ್ಲಿ!

0
20

ಹುಬ್ಬಳ್ಳಿ : ವಾಲ್ಮೀಕಿ ನಿಗಮದ ಅಕೌಂಟ್ ನಲ್ಲಿದ್ದ ಹಣ ಹೊಡೆದವರು ಅದರಲ್ಲಿ ಕಾರ್ ತೆಗೆದುಕೊಂಡಿದ್ದಾರೆ. ಗೋಣಿ ಚೀಲದಲ್ಲಿ ತುಂಬಿಟ್ಟಿದ್ದಾರೆ. ಇಡಿ ಅದೀಕಾರಿಗಳು ದಾಳಿ ನಡೆಸಿದ ಬಳಿಕ ಎಲ್ಲವೂ ಹೊರ ಬರುತ್ತಿದ್ದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ನಿನ್ನೆ ಬೆಂಗಳೂರಿನಲ್ಲಿ ಕೆಲ ಅಧಿಕಾರಿಗಳನ್ನು ಭೇಟಿ ಮಾಡಿದ್ದೆ. ಅವರ ಹೆಸರು ಹೇಳಲಿಕ್ಕೆ ಆಗಲ್ಲ. ಆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಪರ್ಸೆಂಟೇಜ್ ವ್ಯವಹಾರದಲ್ಲಿ ಹಣ ವರ್ಗಾವಣೆಯಾಗಿದೆ. ಉದಾಹರಣೆಗೆ ಒಂದು ಲಕ್ಷ ರೂ ಹಾಕಿದರೆ ಶೇ 10 ಇಟ್ಟುಕೊಂಡು ಡ್ರಾ ಮಾಡಿಕೊಡಬೇಕು. ಆ ರೀತಿ ಹಗರಣ ನಡೆದಿದೆ. ಸಿದ್ದರಾಮಯ್ಯನವರೇ ಇದಕ್ಕೆ ನೇರ ಹೊಣೆ ಎಂದು ಆರೋಪಿಸಿದರು.

Previous articleಸಿದ್ಧರಾಮಯ್ಯ ಸರ್ಕಾರ 100% ಭ್ರಷ್ಟ ಸರ್ಕಾರ
Next articleಎಲ್ಲ ಹಗರಣ ಮಾಡಿ 60 ಸ್ಥಾನಕ್ಕೆ ಇಳಿಕೆಯಾಗಿದ್ದಾರೆ