ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ. ನಾಗೇಂದ್ರ ಕಣ್ಣೀರು

0
11

ಬಳ್ಳಾರಿ: ಜಿಲ್ಲಾಡಳಿತದಿಂದ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿಯೇ ಮಾಜಿ ಸಚಿವ ಬಿ.ನಾಗೇಂದ್ರ ಕಣ್ಣೀರು ಹಾಕಿದ ಘಟನೆ ನಡೆದಿದೆ.
ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಂಧನವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ನಾಗೇಂದ್ರ, ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿದವರು ಯಾರೂ ಕೂಡ ಇಂತಹ ನೀಚ ಕೆಲಸಕ್ಕೆ ಕೈ ಹಾಕಲ್ಲ. ಬಳ್ಳಾರಿ ಜಿಲ್ಲೆಗೆ ನಾನು ಬರಬಾರದು ಅಂತಾ ಮಾಡಿದ್ದೆ. ನಾನು ಆರೋಪ ಮುಕ್ತ ಅಂತಾ ಫ್ರೂವ್ ಮಾಡಿಕೊಂಡು ಬರಬೇಕು ಅಂತಾ ನಿರ್ಧಾರ ಮಾಡಿದ್ದೆ. ಆದರೆ ಪಕ್ಷದ ಹಿರಿಯರು, ಆಪ್ತರ ಒತ್ತಾಯದ ಮೇಲೆ ಬಂದಿರುವೆ. ಈ ಕೆಟ್ಟ ರಾಜಕೀಯದಿಂದ ನನ್ನನ್ನು ಜೈಲಿಗೆ ಕಳುಹಿಸಿದರು. ಈ ಕೆಟ್ಟ ರಾಜಕೀಯ ಮಾಡಿದವರನ್ನ ಈ ಜಿಲ್ಲೆಯಿಂದ ಕಿತ್ತೊಗೆಯುವ ಕೆಲಸ ಮಾಡುವೆ. ನನ್ನ ಆತ್ಮಕ್ಕೆ ಗೊತ್ತು ವಾಲ್ಮೀಕಿ ನಿಗಮದಲ್ಲಿ ಏನ್ ಆಗಿದೆ ಅಂತಾ. ಮೂರು ತಿಂಗಳಲ್ಲಿ ನಾನು ಜೈಲಿನಲ್ಲಿ ನೋವು ಅನುಭವಿಸಿದ್ದೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತಾ ತೀರ್ಮಾನ ಮಾಡಿದ್ದೆ. ಹೀಗೆ ಮಾಡಿದ್ರೆ ಜಿಲ್ಲೆ ರಾಜ್ಯದ ಜನರು ನಾನು ತಪ್ಪು ಮಾಡಿದ್ದೇನೆ ಅಂತಾ ತಿಳಿದುಕೊಳ್ಳುತ್ತಾರೆ. ಹೀಗಾಗಿ ಇದ್ರಿಂದ ನಾನು ದೋಷಮುಕ್ತನಾಗಿ ಹೊರಬರುತ್ತೇನೆ. ನಾನು‌ ಜೈಲಿಗೆ ಹೋಗಲು ಕಾರಣರಾದವರ ಹೆಸರು ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬರೆದು ಬಂದಿದ್ದೇ‌ನೆ. ನನ್ನ ಪರಿಸ್ಥಿತಿಗೆ ಕಾರಣರಾದವರು ಅದೇ ಜೈಲಿಗೆ ಹೋಗಲಿದ್ದಾರೆ ಎಂದು ಕಣ್ಣೀರು ಹಾಕುತ್ತಲೇ ಹೇಳಿದರು.

Previous articleಮಳೆ: ಎರಡು ಮನೆ ಕುಸಿತ
Next articleನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ, ಗುಹಾತೀರ್ಥ ಸ್ನಾನಕ್ಕೆ ಚಾಲನೆ