ಅಣೆಕಟ್ಟೆ ನಿರ್ಮಾಣಗೊಂಡ ನಂತರ ಮೂರನೇ ಬಾರಿಗೆ ಜಲಾಶಯ ಭರ್ತಿ
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವ ವಾಣಿವಿಲಾಸ ಜಲಾಶಯಕ್ಕೆ ಮೈಸೂರು ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಅಣೆಕಟ್ಟೆ ನಿರ್ಮಾಣಗೊಂಡ ನಂತರ ಮೂರನೇ ಬಾರಿಗೆ ಜಲಾಶಯ ಭರ್ತಿಯಾಗಿ ಕೋಡಿ ಹರಿದಿರುವ ಸುಸಂದರ್ಭದಲ್ಲಿ ವೇದಾವತಿ ನದಿಗೆ ಭಕ್ತಿಯಿಂದ ಬಾಗೀನ ಅರ್ಪಿಸಲಾಯಿತು. ಇದೆ ವೇಳೆ ಜಲಾಶಯದ ಬಳಿ ಇರುವ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿˌ ವಿಶೇಷ ಪೂಜೆ ಸಲ್ಲಿಸಿˌ ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು. ಬಳಿಕ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ರಾಜಮಾತೆ ಶ್ರೀ ಕೆಂಪನಂಜಮ್ಮಣ್ಣಿ ಅವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮಿಸಿದ ನಂತರ ವಾಣಿವಿಲಾಸ ಸಾಗರದ ಆಣೆಕಟ್ಟು ವೀಕ್ಷಿಸಲಾಯಿತು ಎಂದಿದ್ದಾರೆ.