ವಸತಿ ಶಾಲೆಯಲ್ಲಿ ಉಪಹಾರ ಸೇವಿಸಿದ ಮಕ್ಕಳು ಅಸ್ವಸ್ಥ

0
29

ರಾಯಚೂರು: ವಸತಿ ಶಾಲೆಯಲ್ಲಿ ಬೆಳಗ್ಗೆ ಉಪಹಾರ ಸೇವಿಸಿದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿದ್ದು ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರು ತಾಲ್ಲೂಕಿನ ಚಂದ್ರಬಂಡಾ ರಸ್ತೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗ್ಗೆ ಪುಲಾವ್ ತಿಂದಿದ್ದ ಮಕ್ಕಳಲ್ಲಿ ವಾಂತಿ, ಬೇಧಿ, ತಲೆ ನೋವು, ಹೊಟ್ಟೆನೋವು ಕಾಣಿಸಿಕೊಂಡಿತ್ತು. ಕೆಲವು ಮಕ್ಕಳಲ್ಲಿ ತಲೆ ತಿರುಗುವಿಕೆ ಕಾಣಿಸಿತ್ತು.ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಇನ್ನು ವಸತಿ ಶಾಲೆಯಲ್ಲಿ ಪುಲಾವ್ ತಯಾರಿಸುವ ವೇಳೆ ಅದಕ್ಕೆ ಹಲ್ಲಿ ಬಿದ್ದಿತ್ತು ಎನ್ನಲಾಗುತ್ತಿದೆ.

Previous articleನೀತಿ ಆಯೋಗದ ಸಭೆ ಬಹಿಷ್ಕಾರ: ಕನ್ನಡಿಗರಿಗೆ ಘೋರ ಅಪಮಾನ
Next articleಅಗ್ನಿವೀರ್‌: ಗುಡ್‌ನ್ಯೂಸ್ ನೀಡಿದ ಕೇಂದ್ರ