ವಕ್ಫ್ ಸಾಯದಿದ್ದರೆ ನಾವು ಇಂಜೆಕ್ಷನ್ ಮಾಡಿ ಕೊಲ್ತೇವೆ

0
33

ವಿಜಯಪುರ: ವಕ್ಫ್ ವಿಚಾರವಾಗಿ ಪ್ರಧಾನಿ ಮೋದಿ ಅವರು ೪೨ ಆಪರೇಷನ್ ಮಾಡುತ್ತಿದ್ದಾರೆ. ಅದರಲ್ಲಿ ವಕ್ಫ್ ಸಾಯದಿದ್ದರೆ ನಾವು ಇಂಜೆಕ್ಷನ್ ಮಾಡಿ ಅದನ್ನು ಕೊಲ್ಲುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಟ್ರಿಬ್ಯೂನಲ್ ಯಾಕೆ ಬೇಕು. ಅದರಲ್ಲಿ ಅವರೇ ನ್ಯಾಯ ಮಾಡುವುದಾದರೆ ಕಳ್ಳರ ಕೈಯ್ಯಲ್ಲಿಯೇ ನಾವು ನ್ಯಾಯ ಬೇಡಬೇಕಾಗುತ್ತದೆ. ಈ ವಕ್ಫ್ ಸಂಪೂರ್ಣವಾಗಿ ನಿರ್ನಾಮವಾಗಬೇಕು. ಅಲ್ಲಿಯವರೆಗೂ ನಾವು ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಬೆಳಗಾವಿ ಅಧಿವೇಶನದಲ್ಲೂ ನಾವು ಇದರ ಕುರಿತು ಧ್ವನಿ ಎತ್ತುತ್ತೇವೆ ಎಂದು ಗುಡುಗಿದರು.
ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ರೇಷನ್ ಕಾರ್ಡ್ ರದ್ದುಗೊಳಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ಸರ್ಕಾರಕ್ಕೆ ಹಿಂದೂಗಳು ಓಟ್ ಹಾಕಿಲ್ಲ. ಹಿಂದೂ ಓಟು ಬೇಡ ಎಂದು ಸಿದ್ದರಾಮಯ್ಯನವರೇ ಹೇಳಿದ್ದು, ಉದ್ದೇಶಪೂರ್ವಕವಾಗಿ ಹಿಂದೂಗಳ ರೇಷನ್ ಕಾರ್ಡ್ ರದುಗೊಳಿಸಲಾಗುತ್ತಿದೆ ಇದರ ವಿರುದ್ಧವೂ ಅಧಿವೇಶನದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದರು.

Previous articleಸರ್ಕಾರ ತನ್ನಿಂತಾನೇ ಬೀಳಲಿದೆ
Next articleಮುನಿ ಮಹಾರಾಜರ ಸಮಾಧಿ ಮರಣ