ವಕ್ಫ್ ಭೂ ಕಬಳಿಕೆ:  ಪ್ರತ್ಯೇಕ ಹೋರಾಟ ಸಲ್ಲದು

0
15

ಹುಬ್ಬಳ್ಳಿ: ವಕ್ಫ್ ಭೂ ಕಬಳಿಕೆ ವಿರುದ್ಧ ರಾಜ್ಯ ಬಿಜೆಪಿ ನಾಯಕರ ಪ್ರತ್ಯೇಕ ಹೋರಾಟ ಸಲ್ಲದು ಎನ್ನುತ್ತ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಬಿಜೆಪಿ ಭಿನ್ನರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶನಿವಾರ ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರೆಲ್ಲರೂ ಒಟ್ಟಿಗೇ ಸೇರಿ ಹೋರಾಟ ರೂಪಿಸಬೇಕು ಎಂದು ಸಲಹೆ ನೀಡಿದರು.
ಹಿಂದೂ ಸಮಾಜಕ್ಕೆ ಕಂಠಕ ಬಂದಿದ್ದು, ಇಂಥ ಸಂದರ್ಭದಲ್ಲಿ ರಾಜ್ಯ ಬಿಜೆಪಿ ತನ್ನ ಹೋರಾಟವನ್ನು ಸಂಘಟನಾತ್ಮಕವಾಗಿ ಕೊಂಡೊಯ್ಯಬೇಕಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷರ ಟೀಂ ಸರಿ ಇದೆ
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು ರಚಿಸಿರುವ ತಂಡದಲ್ಲಿ ಎಲ್ಲಾ ನಾಯಕರೂ ಇದ್ದಾರೆ. ಅದರಂತೆ ಎಲ್ಲಾ ಪ್ರಮುಖರು ಸೇರಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಬೇಕು. ಬೇರೆ ಬೇರೆ ಟೀಂ ಆಗಿ ಹೋರಾಟ ಮಾಡದಂತೆ ಮನವಿ ಮಾಡುತ್ತೇನೆ ಎಂದರು ಪ್ರಲ್ಹಾದ ಜೋಶಿ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ತುಷ್ಟೀಕರಣದ ರಾಜಕಾರಣ ಎಲ್ಲೇ ಮೀರಿದೆ. ಅಲ್ಲದೇ, ಸಮಾಜಕ್ಕೆ ಅದರಲ್ಲೂ ಹಿಂದೂ ಸಮಾಜಕ್ಕೆ ಕಂಠಕ ಎದುರಾಗಿದ್ದು, ರಾಜ್ಯ ಬಿಜೆಪಿ ನಾಯಕರೆಲ್ಲ ಒಟ್ಟಾಗಿ ಸೇರಿ ಹೋರಾಟ ನಡೆಸುವುದು ಒಳ್ಳೆಯದು ಎಂದು ಸಚಿವ ಜೋಶಿ ಪ್ರತಿಕ್ರಿಯಿಸಿದರು.

Previous articleಆಧುನಿಕ ತಂತ್ರಜ್ಞಾನದೊಂದಿಗೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಬಿಡುಗಡೆ
Next articleಖರೀದಿ ಆಗೋಕೆ ಕಾಂಗ್ರೆಸ್ ಶಾಸಕರು ಕತ್ತೆ, ಕುರಿ, ಕೋಣಾನಾ ?