ವಕ್ಫ್ ತಿದ್ದುಪಡಿ ಕಾಯ್ದೆ: ಸಾಂವಿಧಾನಿಕತೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ಮೇ.15ಕ್ಕೆ

0
38

ನವದೆಹಲಿ: ಸುಪ್ರೀಂ ಕೋರ್ಟ್ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ಸಿಜೆಐ ಆಗಿ ನೇಮಕಗೊಂಡ ಬಿಆರ್ ಗವಾಯಿ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಕಳುಹಿಸಿದೆ,
ವಕ್ಫ್ ತಿದ್ದುಪಡಿ ಕಾಯ್ದೆ 2025ನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಮುಂದಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠದಲ್ಲಿ ನಡೆಯಲಿದೆ. ಮೇ 13 ರಂದು ನಿವೃತ್ತರಾಗುವ ಸಿಜೆಐ ಖನ್ನಾ ಹೇಳಿದ್ದಾರೆ. ನಾವು ಪ್ರತಿವಾದ ಮತ್ತು ಮರುಪ್ರತಿವಾದಗಳನ್ನು ಪರಿಶೀಲಿಸಿದ್ದೇವೆ. ನೋಂದಣಿಗೆ ಸಂಬಂಧಿಸಿದ ಕೆಲವು ವಿಚಾರಗಳು ಮತ್ತು ಅರ್ಜಿದಾರರು ಪ್ರಶ್ನಿಸಿರುವ ಕೆಲವು ಅಂಕಿಅಂಶಗಳ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಪರಿಹರಿಸಬೇಕಾಗಿದೆ’ ಎಂದು ಸಿಜೆಐ ಖನ್ನಾ ತಿಳಿಸಿದ್ದಾರೆ. ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಕೂಡ ಪೀಠದಲ್ಲಿದ್ದಾರೆ. ಮಧ್ಯಂತರ ಹಂತದಲ್ಲಿದ್ದರೂ ಸಹ ನಾನು ಯಾವುದೇ ತೀರ್ಪು ಅಥವಾ ಆದೇಶವನ್ನು ಕಾಯ್ದಿರಿಸುವುದಿಲ್ಲ ಈ ವಿಷಯವನ್ನು ಸೂಕ್ತ ದಿನದಲ್ಲಿ ವಿಚಾರಣೆಗೆ ತೆಗೆದುಕೊಳ್ಳಬೇಕು. ಇದು ನನ್ನ ಮುಂದೆ ಇರುವುದಿಲ್ಲ. ನಾವು ಅದನ್ನು ಗುರುವಾರ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಪೀಠದ ಮುಂದೆ ಇರಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ತಿಳಿಸಿದ್ದು, ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ಎ.ಎಂ. ಸಿಂಗ್ವಿ ಮತ್ತು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಜೆಐ ಅವರ ಸಲಹೆಯನ್ನು ಒಪ್ಪಿಕೊಂಡರು.

Previous articleಶಾಶ್ವತ ಕುಡಿವ ನೀರು ಪೂರೈಕೆ ಯೋಜನೆಗೆ ಭೂಮಿಪೂಜೆ
Next articleಬೆಳಗಾವಿ: ಕೂಗಾಡುವುದನ್ನು ನಿಲ್ಲಿಸು, ಕಾರ್ಪೋರೇಟರ್‌ಗೆ ಎಂಎಲ್‌ಎ ಕ್ಲಾಸ್