ಲೋಕಾಯುಕ್ತರ ಬಲೆಗೆ ಸಿರುಗುಪ್ಪ ತಹಸೀಲ್ದಾರ್ ವಿಶ್ವನಾಥ

0
105

ಬಳ್ಳಾರಿ: ಲಂಚ ಸ್ವೀಕರಿಸುತ್ತಿದ್ದ ಸಿರುಗುಪ್ಪ ತಹಶೀಲ್ದಾರ್‌ಎಚ್‌. ವಿಶ್ವನಾಥ್‌ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡಾಗಿ ಹಿಡಿದು ಹಾಕಿದ್ದಾರೆ.
ಸ್ಥಳ ಪರಿಶೀಲನಾ ವರದಿಯೊಂದನ್ನು ನೀಡಲು 3.50 ಲಕ್ಷ ಲಂಚ ಕೇಳುತ್ತಿರುವುದಾಗಿ ಸಾಮಾಜಿಕ ಕಾರ್ಯಕರ್ತ ಮಹಂತೇಶ ಎಂಬುವವರು ಬಳ್ಳಾರಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರು ಆಧರಿಸಿ ಎಫ್‌ಐಆರ್‌ ದಾಖಲು ಮಾಡಿದ್ದ ಲೋಕಾಯುಕ್ತ ಪೊಲೀಸರು, ಮಂಗಳವಾರ ತಹಶೀಲ್ದಾರ್‌ ನಿವಾಸದಲ್ಲೇ ದಾಳಿ ನಡೆಸಿದ್ದಾರೆ. 1.75 ಲಕ್ಷ ಲಂಚ ಪಡೆಯುವಾಗಲೇ ವಿಶ್ವನಾಥ್‌ ಅವರನ್ನು ಬಂಧಿಸಲಾಗಿದೆ.

Previous articleಉಗ್ರರ ದಾಳಿಗೆ ಕನ್ನಡಿಗರು ಗುರಿ: ಅಧಿಕಾರಿಗಳ ತಂಡ ಕಾಶ್ಮೀರಕ್ಕೆ ಪ್ರಯಾಣ
Next articleಭಯೋತ್ಪಾದನೆ ನಮ್ಮನ್ನು ಎಂದಿಗೂ ಕುಗ್ಗಿಸುವುದಿಲ್ಲ