ಲೋಕಪಾಲ್​ ಅಧ್ಯಕ್ಷರಾಗಿ ಖಾನ್ವಿಲ್ಕರ್​ ಅಧಿಕಾರ ಸ್ವೀಕಾರ

0
16

ನವದೆಹಲಿ: ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಜಯ್ ಮಾಣಿಕ್ ರಾವ್ ಖಾನ್ವಿಲ್ಕರ್ ಅವರು ಲೋಕಪಾಲ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿಗಳು ಖಾನ್ವಿಲ್ಕರ್ ಅವರಿಗೆ ಲೋಕಪಾಲ್ ಅಧ್ಯಕ್ಷರಾಗಿ ಪ್ರಮಾಣ ವಚನ ಬೋಧಿಸಿದರು. ಮೇ 27, 2022 ರಂದು ಪಿನಾಕಿ ಚಂದ್ರ ಘೋಷ್ ಅವರ ನಿವೃತ್ತಿಯ ನಂತರ ಲೋಕಪಾಲ ಅಧ್ಯಕ್ಷರ ಹುದ್ದೆ ಖಾಲಿಯಾಗಿತ್ತು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

Previous articleಅಯೋಧ್ಯೆಯಲ್ಲಿ ಕೊನೆಯುಸಿರೆಳೆದ ಉಡುಪಿ ರಾಮಭಕ್ತ
Next articleಇದು ಪಾಪರ್‌ ಸರ್ಕಾರ