Home Advertisement
Home ತಾಜಾ ಸುದ್ದಿ ಲೋಕಕ್ಕೆ ಜಲ ವಾಯು ಗಂಡಾಂತರ: ಕೋಡಿಶ್ರೀ ಭವಿಷ್ಯ

ಲೋಕಕ್ಕೆ ಜಲ ವಾಯು ಗಂಡಾಂತರ: ಕೋಡಿಶ್ರೀ ಭವಿಷ್ಯ

0
120

ಬೆಳಗಾವಿ: ಅನೇಕ ರಾಜಕೀಯ ಮುಖಂಡರಿಗೆ ಸಾವು ಕಾಡಲಿದೆ. ಸಂಕ್ರಾಂತಿಯವರೆಗೆ ರಾಜ್ಯ ಸರಕಾರಕ್ಕೆ ಅಪಾಯವಿಲ್ಲ ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೋಕಕ್ಕೆ ಜಲ ಹಾಗೂ ವಾಯು ಗಂಡಾಂತರವಿದೆ, ಐದು ವರ್ಷ ಮಹಾಮಾರಿ ಬೇರೆ ಬೇರೆ ರೂಪದಲ್ಲಿ ಇರಲಿದೆ. ಜನರು ಹುಷಾರಾಗಿ ಇರೋದು ಒಳ್ಳೆಯದು. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆಗಳಿವೆ. ಲೋಕಕ್ಕೆ ವಾಯು, ಜಲದಿಂದ ಐದು ವರ್ಷ ಗಂಡಾಂತರವಿದೆ ಎಂದಿದ್ದಾರೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ. ಮೇಘಸ್ಫೋಟ ಆಗುವ ಸಾಧ್ಯತೆಗಳು ಇದೆ. ಭೂಕಂಪಗಳು ಆಗಲಿದೆ. ಮತೀಯ ಗಲಭೆ, ಯುದ್ಧದ ಭೀತಿ ಮತ್ತೆ ಪ್ರಾರಂಭವಾಗಲಿದೆ. ಅನೇಕ ರಾಜಕೀಯ ಮುಖಂಡರಿಗೆ ಸಾವು ಕಾಡಲಿದೆ. ಸಂಕ್ರಾಂತಿಯವರೆಗೆ ರಾಜ್ಯ ಸರಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿಯ ನಂತರ ಏನಾಗುತ್ತದೆಯೋ ನೋಡಬೇಕು ಎಂದು ಸ್ವಾಮೀಜಿ ಹೇಳಿದ್ದಾರೆ.