ನವದೆಹಲಿ: ಲಿಮಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾರತ ಉತ್ತಮ ಆರಂಭವನ್ನು ಪಡೆದುಕೊಂಡಿದೆ, ಆರಂಭಿಕ ಮೊದಲ ದಿನವೇ ಮೂರು ಪದಕಗಳನ್ನು ಗೆದ್ದುಕೊಂಡಿದೆ.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸುರುಚಿ ಸಿಂಗ್ ಚಿನ್ನ ಗೆದ್ದಿದ್ದು, ಮನು ಭಾಕರ್ ಅವರಿಗೆ ಬೆಳ್ಳಿ ದೊರೆತಿದೆ, ಇನ್ನು ಪುರುಷರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸೌರಭ್ ಚೌಧರಿ ಅವರಿಗೆ ಕಂಚಿನ ಪದಕ ಲಭಿಸಿದೆ.

                
























