ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಇಂದು ವಿಶ್ವ ವನ್ಯಜೀವಿ ದಿನದಂದು ಅವರು ಗುಜರಾತ್ನ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸುತ್ತಾಡಿ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ನಡೆಸಿದರು.
ಜಂಗಲ್ ಸಫಾರಿಯನ್ನು ನಡೆಸಿದ ಮೋದಿ ಅವರು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿಂಹಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಮಾರ್ಚ್ ತಿಂಗಳು ಗಿರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯ ಎಂದಿದ್ದಾರೆ. ಚಳಿಗಾಲದ ಸಸ್ಯವರ್ಗ ಕಡಿಮೆಯಾಗುತ್ತಿದ್ದಂತೆ, ವನ್ಯಜೀವಿಗಳ ವೀಕ್ಷಣೆಗಳು ಹೆಚ್ಚಾಗಿ ಕಂಡುಬರುತ್ತವೆ.