ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಕೊಡಲಿ ಪೆಟ್ಟು

0
10
ಬಿ ವೈ ವಿಜಯೇಂದ್ರ

ಹೊಸ ಕಾಮಗಾರಿಗಳಿಗೆ ಚಾಲನೆಯೂ ಸಿಗಲಿಲ್ಲ, ಯಾವ ಇಲಾಖೆಯ ಅಧಿಕಾರಿಗಳಿಗೂ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ

ಬೆಂಗಳೂರು: ಅತಿಥಿ ಉಪನ್ಯಾಸಕರರಿಗೆ ಕಳೆದ 4 ತಿಂಗಳಿಂದಲೂ ವೇತನ ನೀಡದೇ ಶಿಕ್ಷಕರು ಜೀವನ ನಡೆಸವುದೂ ಕಷ್ಟವಾಗಿದೆ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಕಿಡಿಕಾರಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಜನಸಾಮಾನ್ಯರಿಂದ ಹಿಡಿದು ಅಧಿಕಾರಿ ವರ್ಗದವರೆಗೂ ಕಾಂಗ್ರೆಸ್ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವುದು ನಿಲ್ಲುವಂತೆ ಕಾಣುತ್ತಿಲ್ಲ. ಯಾವೊಂದು ಹೊಸ ಯೋಜನೆಗಳೂ ಜಾರಿಯಾಗಲಿಲ್ಲ, ಹೊಸ ಕಾಮಗಾರಿಗಳಿಗೆ ಚಾಲನೆಯೂ ಸಿಗಲಿಲ್ಲ, ಯಾವ ಇಲಾಖೆಯ ಅಧಿಕಾರಿಗಳಿಗೂ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ತಪ್ಪುತ್ತಿಲ್ಲ.

ಇದೀಗ ಶಿಕ್ಷಕರಿಗೂ ಸಂಕಟ ತಂದೊಡ್ಡಿರುವ ಕಾಂಗ್ರೆಸ್ ಸರ್ಕಾರ ಸೇವಾ ಭದ್ರತೆಗಾಗಿ ನಿರಂತರ ಹೋರಾಟ ನಡೆಸುತ್ತಲೇ ತ್ರಿಶಂಕು ಸ್ಥಿತಿಯಲ್ಲಿ ದಿನ ದೂಡುತ್ತಿರುವ ಅತಿಥಿ ಉಪನ್ಯಾಸಕರರಿಗೆ ಕಳೆದ 4 ತಿಂಗಳಿಂದಲೂ ವೇತನ ನೀಡದೇ ಶಿಕ್ಷಕರು ಜೀವನ ನಡೆಸವುದೂ ಕಷ್ಟವಾಗಿದೆ.

ಸರ್ಕಾರದ ಈ ತಾತ್ಸಾರ ಧೋರಣೆಯಿಂದಾಗಿ 42 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗಷ್ಟೇ ಅಲ್ಲ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಕೊಡಲಿ ಪೆಟ್ಟು ಬೀಳಲಿದೆ. ತಕ್ಷಣ ಈ ದಪ್ಪ ಚರ್ಮದ ಸರ್ಕಾರ ಉಪನ್ಯಾಸಕರಿಗೆ ವೇತನ ಬಿಡುಗಡೆ ಮಾಡದಿದ್ದರೆ ಬಿಜೆಪಿ ಉಪನ್ಯಾಸಕರ ಪರ ಬೀದಿಗಿಳಿಯಬೇಕಾದೀತು. ಎಚ್ಚರ ಎಂದಿದ್ದಾರೆ.

Previous articleಇಂದು ಹುಬ್ಬಳ್ಳಿಯಲ್ಲಿ ಮಾರ್ಟಿನ್‌…
Next articleಖ್ಯಾತ ನಟ ಮೋಹನ್ ರಾಜ್ ನಿಧನ