ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ

0
11


ಬಳ್ಳಾರಿ: ಲಂಚ‌ ಸ್ವೀಕರಿಸುವಾಗ ಪಿಡಿಒ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಪ್ರಕರಣ ಮಂಗಳವಾರ ಸಂಜೆ ನಡೆದಿದೆ.
ಶ್ರೀಧರಗಡ್ಡೆ ಪಿಡಿಓ ಪ್ರಾಣೇಶ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ‌ಲೇಔಟ್ ಹಸ್ತಾಂತರಕ್ಕೆ 7 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಪಿಡಿಓ,
ವೀರೇಶ್ ಎನ್ನುವವರು ದೂರಿನ ಮೇರೆಗೆ 2 ಲಕ್ಷದ ಹಣವನ್ನು ಪಡೆಯುವಾಗ ದಾಳಿ ಲೋಕಾಯುಕ್ತ ಅಧಿಕಾರಿಗಳು ದಾಳಿ‌ ಮಾಡಿದ್ದಾರೆ.
ಬಳ್ಳಾರಿಯ ಕಪ್ಪಗಲ್ ರಸ್ತೆಯ ಖಾಸಗಿ ವ್ಯಕ್ತಿ ಶಂಕರ್ ಮನೆಯಲ್ಲಿ ಲಂಚ ಸ್ವೀಕರಿಸುವಾಗ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಶಂಕರ ಮನೆಯಲ್ಲಿವೆ ಕೆಲವು ಪಿಡಿಓಗಳ ಸರ್ಕಾರಿ ದಾಖಲೆಗಳು ಪತ್ತೆ ಮಾಡಿದ್ದಾರೆ.‌ ಕೆಲವು‌ ಗ್ರಾಮ ಪಂಚಾಯ್ತಿಯ ಹಲವು ದಾಖಲೆಗಳ ವಶ ಪಡಿಸಿಕೊಂಡಿದ್ದಾರೆ.

Previous articleಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು: ವಿಧೇಯಕ ಮಂಡನೆಗೆ ಸಂಪುಟ ಒಪ್ಪಿಗೆ
Next articleಗಿರಿ ಪ್ರದೇಶಕ್ಕೆ ಜುಲೈ ೨೨ ರವರೆಗೆ ವಾಹನಗಳ ಸಂಚಾರ ನಿಷೇಧ