ಗುಜರಾತ್: ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೊ ಸಾಂಚೇಜ್ ವಡೋದರದ ವಿಮಾನ ತಯಾರಿಕೆಯ ಘಟಕ ಉದ್ಘಾಟನೆಗೆ ಮುನ್ನ ವಡೋದರದ ರಸ್ತೆಗಳಲ್ಲಿ ಪ್ರಧಾನಿ ಮೋದಿ, ಸ್ಪೇನ್ ಅಧ್ಯಕ್ಷನ ಜೊತೆಗೆ ರೋಡ್ ಶೋ ನಡೆಸಿದರು.
ಈ ಸಂದರ್ಭದಲ್ಲಿ ಎಂಎಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ದಿಯಾ ಗೋಸಾಯಿ (ಕಲಾವಿದೆ) ಅವರು ಉಭಯ ದೇಶದ ಪ್ರಧಾನಿಗಳ ಭಾವಚಿತ್ರಗಳನ್ನು ಬಿಡಿಸಿದ್ದರು ರೋಡ್ ಶೋ ವೇಳೆ ಇಬ್ಬರು ಪ್ರಧಾನ ಮಂತ್ರಿಗಳು ಅವಳ ಚಿತ್ರ ಪ್ರದರ್ಶನವನ್ನು ಗಮನಿಸಿ, ತೆರೆದ ಜೀಪಿನಿಂದ ಇಳಿದುಬಂದು ದಿಯಾಗೆ ಹಸ್ತಲಾಘ ಮಾಡಿ ಶುಭಹಾರೈಸಿದರು, ದೀಯಾ ಅವರು ಬಿಡಿಸಿದ ಭಾವಚಿತ್ರಗಳನ್ನು ಪ್ರಧಾನಿಗಳಿಗೆ ಊಡುಗರೆಯಾಗಿ ನೀಡಿದರು.