ಹುಬ್ಬಳ್ಳಿ : ರೈಲ್ವೆ ಸುರಕ್ಷತೆ ಹಾಗೂ ವೇಗದ ಮಿತಿ ಹೆಚ್ಚಳ ಕುರಿತಂತೆ ಕೈಗೊಂಡ ಕಾಮಗಾರಿ ಕುರಿತು ಮಂಗಳವಾರ ಸಂಜೆ ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಮುಖುಲ್ ಸರನ್ ಮಾಥೂರ ಅವರು ರೈಲ್ಉ ಸೌಧದಲ್ಲಿ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಮುಖ್ಯವಾಗಿ ಹುಬ್ಬಳ್ಳಿ – ಕರ್ಜಗಿ ವಿಭಾಗದಲ್ಲಿ ವೇಗಮಿತಿ ಉನ್ನತೀಕರಣ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಿ ವಿವರ ಪಡೆದರು.
ರೈಲ್ಚೆ ಸುರಕ್ಷತೆ, ರೈಲ್ವೆ ಮಾರ್ಗ ಸುರಕ್ಷತೆ ಅದರಲ್ಲೂ ಘಾಟ್ ಸೆಕ್ಷನ್ ಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮ, ಸುಧಾರಣಾ ಕ್ರಮ, ತುರ್ತಾಗಿ ಮೂಲಸೌಕರ್ಯ ಕಲ್ಪಿಸುವ ಯೋಜನೆ ಜಾರಿ ಕುರಿತು ಚರ್ಚಿಸಿದರು.
ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್ ಜೈನ್, ಸಿಎಓ ಅಜಯ್ ಶರ್ಮಾ, ವಿವಿಧ ವಿಭಾಗಗಳ ಮುಖ್ಯಸ್ಥರು ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ರೈಲ್ವೆ ವ್ಯವಸ್ಥಾಪಕರು ಭಾಗವಹಿಸಿದ್ದರು .