ರೈತ ಆತ್ಮಹತ್ಯೆ: ಹೆದ್ದಾರಿ ಮೇಲೆ ಶವವಿಟ್ಟು ಪ್ರತಿಭಟನೆ

0
23
ಆತ್ಮಹತ್ಯೆ

ಕಲಬುರಗಿ(ಅಫಜಲಪುರ): ತಾಲೂಕಿನ ಘತ್ತರಗಾ ಗ್ರಾಮದಲ್ಲಿ ಕೃಷಿಗಾಗಿ ಮಾಡಿಕೊಂಡ ಸಾಲ ಮರುಪಾವತಿ ಮಾಡಲಾಗದೆ ಮನನೊಂದ ರೈತ ಚಂದ್ರಕಾಂತ ಬೇಲೂರ(೬೦) ನೇಣು ಬಿಗಿದುಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೈತ ೨೦ ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಕೃಷಿಗಾಗಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ೧೫ ಲಕ್ಷ ಸೇರಿ ಖಾಸಗಿಯಾಗಿ ೪೫ ಲಕ್ಷ ಹೀಗೆ ಅಂದಾಜು ೬೦ ಲಕ್ಷದಷ್ಟು ಸಾಲ ಮಾಡಿಕೊಂಡಿದ್ದರು. ಮಾಡಿದ ಸಾಲ ಮರುಪಾವತಿ ಮಾಡಲಾಗದೆ ನೇಣಿಗೆ ಶರಣಾಗಿದ್ದಾರೆ. ರೈತ ಚಂದ್ರಕಾಂತ ನೇಣಿಗೆ ಶರಣಾದ ಮಾಹಿತಿ ತಿಳಿದು ರೈತ ಸಂಘಟಕರು, ಹೋರಾಟಗಾರರು ರೈತನ ಶವ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ರಾಜ್ಯ ಹೆದ್ದಾರಿ ಮೇಲೆ ಇಟ್ಟು ಪ್ರತಿಭಟನೆ ನಡೆಸಿ ಪರಿಹಾರಕ್ಕಾಗಿ ಒತ್ತಾಯಿಸಿದರು.

Previous articleಡಿಕೆಶಿ ಕ್ಷಮೆ ಕೇಳಲು 24ರವರೆಗೆ ಗಡುವು
Next articleಹಿರಿಯ ಸಚಿವನ ರಾಜಕೀಯ ಜೀವನ ಮುಗಿಸುವುದಕ್ಕೆ ಹನಿಟ್ರ್ಯಾಪ್