ರೈತ್‌ನಿಗೆ ಬಂತು 3 ಲಕ್ಷ ವಿದ್ಯುತ್ ಬಿಲ್‌: 15 ದಿನದಲ್ಲಿ ಪಾವತಿಸದಿದ್ದರೆ ಕನೆಕ್ಷನ್ ಕಟ್

0
75

ಚಿಕ್ಕಮಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಅವರ ಜಿಲ್ಲೆಯ ರೈತರೊಬ್ಬರಿಗೆ ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಬರೊಬ್ಬರಿ ೩ ಲಕ್ಷದ ೨೦ ಸಾವಿರದ ರೂಪಾಯಿ ಬಿಲ್ ಬಂದಿದೆ.
ಹೌದು ಅದು ೧೩ ವರ್ಷಗಳ ಬಳಿಕ, ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಸಮೀಪದ ಬಿಕ್ಕರಣೆ ಗ್ರಾಮದ ರೈತ ಉಮೇಶ್ ಎಂಬುವರಿಗೆ ಮೆಸ್ಕಾಂ ನಿಂದ ಈ ಬಿಲ್ ನೀಡಲಾಗಿದೆ.
ರೈತ ಉಮೇಶ್ ತಮ್ಮ ಜಮೀನಿನ ಅಡಿಕೆ, ಕಾಫಿ ಬೆಳೆಗಳಿಗೆ ನೀರನ್ನು ಹಾಯಿಸಲು ೧೦ ಹೆಚ್.ಪಿ ಮೋಟರನ್ನು ಬಳಸಿಕೊಂಡಿದ್ದರು. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ೧೦ ಹೆಚ್.ಪಿ ಮೋಟಾರ್‌ಗಳಿಗೆ ಉಚಿತ ಕರೆಂಟ್ ನೀಡಲಾಗಿದೆ. ಈಗ ಯಾಕೆ ವಿದ್ಯುತ್ ಬಿಲ್ ಕಟ್ಟಿ ಎಂದು ನೋಟಿಸ್ ಕಳಿಸಿದ್ದೀರಾ ಎಂದು ರೈತ ಉಮೇಶ್ ಮೆಸ್ಕಾಂ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಮೆಸ್ಕಾಂ ಅಧಿಕಾರಿಗಳು ಕಾಫಿ ಬೆಳೆಗಾರರಿಗೆ ಫ್ರೀ ಕರೆಂಟ್ ಇಲ್ಲ ಎಂದು ತಿಳಿಸಿದ್ದಾರಂತೆ. ಇದು ಕಾಫಿ ಬೆಳಗಾರರ ಕೆಂಗಣ್ಣಿಗೆ ಗುರಿಯಾಗಿದೆ. ೧೬೦ ತಿಂಗಳ ೩ ಲಕ್ಷದ ೨೦ ಸಾವಿರದ ರೂಪಾಯಿಬಿಲ್ಲನ್ನು ೧೫ ದಿನದಲ್ಲಿ ಪಾವತಿಸದಿದ್ದರೆ ಕನೆಕ್ಷನ್ ಕಟ್ ಮಾಡುತ್ತೀವಿ ಅಂತ ಮೆಸ್ಕಾಂನಿಂದ ರೈತ ಉಮೇಶ್‌ಗೆ ನೋಟಿಸ್ ಕೂಡ ನೀಡಲಾಗಿದೆ. ಹೀಗಾಗಿ ರೈತ ಉಮೇಶ್ ಮೆಸ್ಕಾಂ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

Previous articleಶಿವಲಿಂಗ ಪೂಜೆಗೆ ಪೊಲೀಸ್‌ ಭದ್ರತೆ
Next articleಬಾಯಿ ಮುಚ್ಚಿಕೊಂಡು ಕೂತರೆ ಮಠ ಹೋಗುವುದು ಗ್ಯಾರಂಟಿ