ರಾಹುಲ್ ಗಾಂಧಿಗೆ ದೇಗುಲಕ್ಕೆ ನೋ ಎಂಟ್ರಿ!

0
14

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಸ್ಸಾಂ ರಾಜ್ಯದ ದೇಗುಲವೊಂದರ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ.
15ನೇ ಶತಮಾನದ ಸತ್ರಾ ದೇಗುಲಕ್ಕೆ ರಾಹುಲ್ ಗಾಂಧಿ ತೆರಳಿದ್ದರು. ಆದರೆ, ರಾಹುಲ್ ಗಾಂಧಿ ಅವರು ದೇವಾಲಯ ಪ್ರವೇಶ ಮಾಡೋದಕ್ಕೆ ಅವಕಾಶ ಸಿಗಲಿಲ್ಲ. ಈ ವೇಳೆ ದೇಗುಲ ಆಡಳಿತ ಮಂಡಳಿಗೆ ಪ್ರಶ್ನೆ ಮಾಡಿದ ರಾಹುಲ್ ಗಾಂಧಿ, ನನಗೆ ನಿರ್ಬಂಧ ವಿಧಿಸಿರೋದು ಏಕೆ ಎಂದು ಪ್ರಶ್ನಿಸಿದರು. ನಾವು ದೇಗುಲಕ್ಕೆ ಭೇಟಿ ನೀಡಲು ಬಯಸಿದ್ದೇವೆ. ಆದರೆ, ನಮಗೆ ಅವಕಾಶ ನೀಡುತ್ತಿಲ್ಲ. ನಾವು ಮಾಡಿದ ಅಪರಾಧವಾದ್ರೂ ಏನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಜನವರಿ 11 ರಂದು ದೇಗುಲಕ್ಕೆ ಭೇಟಿ ನೀಡುವಂತೆ ನನಗೆ ಆಹ್ವಾನ ಬಂದಿತ್ತು, ಆದರೆ ನಾವು ಇಂದು ಇಲ್ಲಿಗೆ ಬಂದಾಗ, ನನಗೆ ಭೇಟಿ ನೀಡಲು ಅವಕಾಶ ನೀಡಲಿಲ್ಲ, ಉಳಿದವರೆಲ್ಲರೂ ಅಲ್ಲಿಗೆ ಹೋಗಬಹುದು ಆದರೆ ನನಗೆ ಅವಕಾಶವಿಲ್ಲ ಎಂದು ರಾಹುಲ್ ಅವರು ಪ್ರವೇಶ ನಿರಾಕರಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

Previous articleಪೂಜೆಗೆ ಆಗಮಿಸಿದ ಪ್ರತಾಪ್ ಸಿಂಹಗೆ ಘೇರಾವ್
Next articleಪುಟ್ಟ ಕಂದನಿಗೆ ಶ್ರೀರಾಮ ಎಂದು ನಾಮಕರಣ