ರಾಹುಲ್ ಗಾಂಧಿಗೆ ಜಾಮೀನು

0
7

ಅಮಿತ್ ಶಾ ಅವರ ವಿರುದ್ಧ 2018ರ ಚುನಾವಣೆಯ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬದಿಸಿದಂತೆ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಇಲ್ಲಿನ ಸುಲ್ತಾನ್​ಪುರ ಸ್ಥಳೀಯ ನ್ಯಾಯಾಲಯದಲ್ಲಿ ಮಂಗಳವಾರ ಹಾಜರಾದರು.
ಉತ್ತರಪ್ರದೇಶದಲ್ಲಿ ಸಾಗುತ್ತಿರುವ ಭಾರತ್​ ಜೋಡೋ ನ್ಯಾಯ್​ ಯಾತ್ರೆಗೂ ಮೊದಲು ಅವರು ಕೋರ್ಟ್​ಗೆ ಖುದ್ದು ಹಾಜರಾಗಲು ಸುಲ್ತಾನ್​ಪುರಕ್ಕೆ ಆಗಮಿಸಿದರು. ಬಳಿಕ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಹಾಜರಾದರು. ನ್ಯಾಯಾಲಯವು ವಿಚಾರಣೆ ನಡೆಸಿ ಅವರಿಗೆ ಜಾಮೀನು ನೀಡಿದೆ.

2018 ರ ಪ್ರಕರಣ: 2018 ರ ಚುನಾವಣೆಯ ಸಂದರ್ಭದಲ್ಲಿ ನಡೆದ ಸಮಾವೇಶವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೊಲೆಗಾರ ಎಂದು ಕರೆಯುವ ವೀಡಿಯೊ ಕ್ಲಿಪ್ ವೈರಲ್ ಆಗಿತ್ತು.

Previous articleಕಾಟೇರ ಚಿತ್ರಕ್ಕೆ 50 ದಿನ – ಚಿತ್ರಮಂದಿರಕ್ಕೆ 50 ವರ್ಷದ ಸಂಭ್ರಮ
Next articleಜೆರೋಸಾ ಶಾಲೆ ಪ್ರಕರಣ: ಶಾಸಕರಿಗೆ ನಿರೀಕ್ಷಣಾ ಜಾಮೀನು