ನವದೆಹಲಿ: ಭಾರತೀಯ ಷೇರು ವಿನಿಮಯ ಮಂಡಳಿ ಮತ್ತದರ ಅಧ್ಯಕ್ಷೆ ಮಾಧಬಿ ಬುಚ್ ವಿರುದ್ಧ ಆರೋಪ ಮಾಡಿರುವ ಹಿಂಡನ್‌ಬರ್ಗ್ ರಿಸರ್ಚ್ ವರದಿಯನ್ನು ಅನುಮೋದಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಬ್ಬ ಭಾರಿ ಅಪಾಯಕಾರಿ ವ್ಯಕ್ತಿ ಎಂದು ಸಂಸದೆ-ನಟಿ ಕಂಗನಾ ರಣಾವತ್ ಟೀಕಿಸಿದ್ದಾರೆ. ದೇಶ ಮತ್ತು ಅದರ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ರಾಹುಲ್ ಪ್ರತಿಯೊಂದು ರೀತಿಯಲ್ಲೂ ಪ್ರಯತ್ನಿಸುತ್ತಿದ್ದಾರೆ ಎಂದು ರಣಾವತ್ ತಮ್ಮ ಎಕ್ಸ್ ತಾಣದಲ್ಲಿ ದೂಷಿಸಿದ್ದಾರೆ. ರಾಹುಲ್ ಒಬ್ಬ ಕಠೋರ, ವಿಷಕಾರಿ ಹಾಗೂ ವಿನಾಶಕಾರಿ ವ್ಯಕ್ತಿ. ಪ್ರಧಾನಿಯಾಗಲು ಸಾಧ್ಯವಾಗದಿದ್ದರೆ ದೇಶವನ್ನು ನಾಶ ಮಾಡುವುದು ರಾಹುಲ್ ಕಾರ್ಯಸೂಚಿಯಾದಂತಿದೆ ಎಂದು ಕಂಗನಾ ಆರೋಪಿಸಿದ್ದಾರೆ.