ನವದೆಹಲಿ: ರಾಷ್ಟ್ರಪತಿ ಭವನದ ಎರಡು ಸಭಾಂಗಣಗಳ ಹೆಸರನ್ನು ಮರು ನಾಮಕರಣ ಮಾಡಲಾಗಿದೆ.
ದರ್ಬಾರ್ ಹಾಲ್ ಮತ್ತು ಅಶೋಕ ಹಾಲ್‌ಗಳ ಹೆಸರನ್ನು ಬದಲಾಯಿಸಲಾಗಿದ್ದು, ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಎಂದೂ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ ಮಂಟಪ’ ಎಂದೂ ಮರುನಾಮಕರಣ ಮಾಡಲಾಗಿದೆ. ರಾಷ್ಟ್ರಪತಿ ಭವನದಿಂದ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ.