ರಾಷ್ಟ್ರಧ್ವಜಕ್ಕೆ ಅಪಮಾನ ಪ್ರಕರಣ: ಇಬ್ಬರ ವಿರುದ್ಧ ಪ್ರಕರಣ

0
57

ಯಲಬುರ್ಗಾ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪದಡಿ ಸಹೋದರರಿಬ್ಬರ ಮೇಲೆ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಹೋದರರಾದ ಮಹ್ಮದ್‌ದಾನೀಶ್ ಖಾಜಿ ಹಾಗೂ ಮಹ್ಮದ್ ಅದಿನಾನ್ ಖಾಜಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈದ್ ಮಿಲಾದ್ ಆಚರಣೆ ನಿಮಿತ್ತ ಸೆ. ೧೬ರಂದು ಪಟ್ಟಣದ ಬಿಬಿ ಫಾತೀಮಾ ದರ್ಗಾದ ಮೇಲೆ ಕೇಸರಿ, ಬಿಳಿ, ಹಸಿರು ಬಣ್ಣಗಳಿರುವ ಧ್ವಜ ಕಟ್ಟಿದ್ದರು. ಧ್ವಜ ಹೊಲಿದು ಅದರ ಮೇಲೆ ಅರೇಬಿಕ್ ಅಕ್ಷರಗಳಲ್ಲಿ ‘ಲಾ ಇಲಾಹ್ ಇಲ್ಲಲ್ಲಾ ಮೊಹಮದ್ ರಸೂಲಲ್ಲಾ’ ಎಂದು ಬರೆದಿದ್ದರು.
ಕತ್ತಿ ಹಾಗೂ ಮದೀನಾ ಮಸೀದಿಯ ಚಿತ್ರವನ್ನೂ ಸಹ ಧ್ವಜದ ಮೇಲೆ ಚಿತ್ರಿಸಿದ್ದರು. ರಾಷ್ಟ್ರಧ್ವಜ ಹೋಲುವ ಧ್ವಜದ ಮಧ್ಯದಲ್ಲಿನ ಅಶೋಕ ಚಕ್ರ ತೆಗೆಯಲಾಗಿತ್ತು.
ಸೆ. ೨೦ರಂದು ಖಚಿತ ಮಾಹಿತಿ ಮೇರೆಗೆ ಪೊಲೀಸರು ದರ್ಗಾಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ವಿಚಾರಣೆ ನಡೆಸಿ, ರಾಷ್ಟ್ರಧ್ವಜಕ್ಕೆ ಅಪಮಾನ ಹಾಗೂ ವಿರೂಪಗೊಳಿಸುವ ಉದ್ದೇಶದಿಂದ ಈ ಕೃತ್ಯ ಮಾಡಿದ್ದು ದೃಢಪಟ್ಟಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Previous articleರೇಣುಕಾಸ್ವಾಮಿ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು
Next articleಈದ್‌ಮಿಲಾದ್ ಮೆರವಣಿಗೆ ನಂತರ ಗಲಾಟೆ: ನಾಲ್ವರಿಗೆ ತಲ್ವಾರ್‌ನಿಂದ ಹಲ್ಲೆ