ರಾಯರ ಹುಂಡಿಯಲ್ಲಿ ₹ 3.79 ಕೋಟಿ ಕಾಣಿಕೆ ಸಂಗ್ರಹ

0
33

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯಲ್ಲಿ ಕಳೆದ 28 ದಿನಗಳ ಕಾಲ ಭಕ್ತರು ಕಾಣಿಕೆ ರೂಪದಲ್ಲಿ ಹಾಕಿರುವ ಹುಂಡಿ ಹಣವನ್ನು ಮಂಗಳವಾರ ಎಣಿಕೆ ಮಾಡಲಾಗಿದ್ದು, ₹ 3.79 ಕೋಟಿ ಹಣ ಸಂಗ್ರಹವಾಗಿದೆ. ಅಲ್ಲದೇ 74 ಗ್ರಾಂ ಚಿನ್ನ, 1,830 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
3,66,88,595 ರೂ. ಮೌಲ್ಯದ ನೋಟುಗಳು, 12,21,860 ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು 3,79,10,455 ರೂ. ಗಳ ಹಣ ಸಂಗ್ರಹವಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleಸಿಡಿಲು ಬಡಿದು ಓರ್ವ ಸಾವು, ಐವರಿಗೆ ಆಘಾತ
Next articleಚಿನ್ನ ಕಳ್ಳಸಾಗಣೆ ಕೇಸಲ್ಲಿ ಕೊನೆಗೂ ರನ್ಯಾಗೆ ಜಾಮೀನು