ರಾಮೇಶ್ವರಂ ಕೆಫೆ ಪ್ರಕರಣ: NIA ಅಧಿಕಾರಿಗಳಿಂದ ಬಳ್ಳಾರಿ ನಗರದಲ್ಲಿ ಮತ್ತೊಮ್ಮೆ ಶೋಧ

0
21
NIA

ಬಳ್ಳಾರಿ: ಬೆಂಗಳೂರಿನ ದಿ.ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಬಳ್ಳಾರಿ ನಗರದಲ್ಲಿ ಮತ್ತೊಮ್ಮೆ ಶೋಧ ಕಾರ್ಯಾಚರಣೆಗೆ ಮುಂದಾದ ಎನ್ ಐಎ ಅಧಿಕಾರಿಗಳು.
ಬುಧವಾರ ಬೆಳಗಿನ ಜಾವ ಬಳ್ಳಾರಿಗೆ ಆಗಮಿಸಿದ ಐವರು ಎನ್ಐಎ ಅಧಿಕಾರಿಗಳ ತಂಡ, ನಗರದ ಹೊಸ ಬಸ್ ನಿಲ್ದಾಣ ಬಳಿಯ ಟ್ಯಾಂಕ್ ಬಂಡ್ ರಸ್ತೆಯಲ್ಲಿನ ಶಬ್ಬೀರ್ ಅಹ್ಮದ್ ಎನ್ನುವವರನ್ನು ವಿಚಾರಣೆಗೆಂದು ವಶಕ್ಕೆ ಪಡೆದಿರುವ ಎನ್ ಐಎ ಅಧಿಕಾರಿಗಳು.
ಜಿಂದಾಲ್ ಉದ್ಯೋಗಿಯಾಗಿರುವ ಶಬ್ಬೀರ್ ಅಹ್ಮದ್ ಶಂಕಿತ ಉಗ್ರನೊಂದಿಗೆ ಸಂಪರ್ಕ ಹೊಂದಿರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಶಬ್ಬೀರ್ ನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿರುವ ಎನ್ ಐ ಎ ಅಧಿಕಾರಿಗಳು.

Previous articleಕಾಂಗ್ರೆಸ್‌ನ ಎರಡನೇ ಪಟ್ಟಿ 15 ಕ್ಕೆ ಬಿಡುಗಡೆ
Next articleಶೆಟ್ಟರ್‌ಗೆ ಧಾರವಾಡ ಟಿಕೆಟ್ ಕೊಟ್ಟರೆ ಒಳ್ಳೆಯದು