ಬಳ್ಳಾರಿ: ಸಂಡೂರು ಉಪಚುನಾವಣೆಯ ಟಿಕೆಟ್ ಘೋಷಣೆಯಾದರೂ ಇದುವರೆಗು ಪ್ರಚಾರಕ್ಕೆ ಇಳಿಯದೇ ದೂರ ಉಳಿದಿದ್ದ ಬಿ.ಶ್ರೀರಾಮುಲು ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದಿಢೀರ್ ಭೇಟಿ ನೀಡಿ ಕೆಲ ಕಾಲ ಚರ್ಚೆ ನಡೆಸಿದರು.
ಸಂಡೂರು ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡಿದಾಗಿನಿಂದಲೂ ರಾಮುಲು ಸಂಡೂರು ಭಾಗದಲ್ಲಿ ಎಲ್ಲೂ ಓಡಾಡುತ್ತಿಲ್ಲ. ಬಳ್ಳಾರಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದು ಬಿಟ್ಟರೇ ಚುನಾವಣೆ ಚಟುವಟಿಕೆಯಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ಗುರುವಾರ ಬೆಳಗ್ಗೆ ಶ್ರೀರಾಮುಲು ನಿವಾಸಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಸಂಡೂರು ಬೈ ಎಲೆಕ್ಷನ್ ಬಗ್ಗೆ ಕಾರ್ಯತಂತ್ರ ರೂಪಿಸುವ ಬಗ್ಗೆ ಚರ್ಚೆ ಮಾಡಿದರು. ನಾಳೆ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರು ನಾಮಪತ್ರ ಸಲ್ಲಿಸಲಿದ್ದು, ಎಲ್ಲ ನಾಯಕರು ಒಟ್ಟುಗೂಡಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೇಳಿದರು. ಮಾಜಿ ಶಾಸಕ ಕಂಪ್ಲಿ ಸುರೇಶ ಬಾಬು ಸೇರಿ ಹಲವರು ಇದ್ದರು.