ರಾಮಮಂದಿರ ನಿರ್ಮಾಣದ ಯೋಗ್ಯತೆ ಕಾಂಗ್ರೆಸ್ಸಿಗೆ ಇಲ್ಲ

0
17

ಹುಬ್ಬಳ್ಳಿ: ರಾಮಮಂದಿರ ನಿರ್ಮಾಣ ವಿಚಾರ ಬಿಟ್ಟು ಕಾಂಗ್ರೆಸ್‌ನವರಿಗೆ ಚರ್ಚೆ ಮಾಡಲು ಬೇರೆ ವಿಷಯ ಇಲ್ಲ. ರಾಮ ಮಂದಿರ ನಿರ್ಮಾಣ ಮಾಡುವ ಯೋಗ್ಯತೆ ಕಾಂಗ್ರೆಸ್‌ನವರಿಗೆ ಎಲ್ಲಿತ್ತು? ಆ ಕೆಲಸ ನರೇಂದ್ರ ಮೋದಿ ಅವರ ಕಾಲದಲ್ಲಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಜಗದೀಶ ಶೆಟ್ಟರ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ರಿಟಿಷರಿಂದ ಸ್ವಾತಂತ್ರö್ಯ ತಂದು ಕೊಟ್ಟಿದ್ದೇವೆ, ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಹೇಳಿಕೊಂಡು ೭೦ ವರ್ಷ ದೇಶ ಆಳಿದ ಕಾಂಗ್ರೆಸ್‌ನಿಂದ ದೇಶ ಅಭಿವೃದ್ಧಿ ಕಂಡಿರಲಿಲ್ಲ. ವಾಜಪೇಯಿ ಮತ್ತು ಈಗ ನರೇಂದ್ರ ಮೋದಿ ಅವರ ಅಧಿಕಾರ ಅವಧಿಯಲ್ಲಿ ದೇಶ ಅಭಿವೃದ್ಧಿ ಕಂಡಿದೆ ಎಂದರು.
ಕಾಂಗ್ರೆಸ್‌ಗೆ ಹೋಗಿದ್ದು ತಪ್ಪು ಹೆಜ್ಜೆ ಅಲ್ಲ: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಆಗಿನ ಪರಿಸ್ಥಿತಿ ಹಾಗಿತ್ತು. ಕಾಂಗ್ರೆಸ್‌ಗೆ ಹೋಗಿದ್ದು ತಪ್ಪು ಹೆಜ್ಜೆ ಅಲ್ಲವೇ ಅಲ್ಲ. ಈಗಾಗಲೇ ಈ ಬಗ್ಗೆ ನಾನು ಸ್ಪಷ್ಟನೆ ನೀಡಿದ್ದೇನೆ. ಯಾವುದಕ್ಕೂ ನಾನು ಪಶ್ಚಾತ್ತಾಪಪಟ್ಟಿಲ್ಲ ಎಂದರು.

Previous articleನಿವೃತ್ತ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಧರಣಿ
Next articleವಿರುಷ್ಕಾ ಜೋಡಿಗೆ ಗಂಡು ಮಗು