ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಪಕ್ಷದ ಸಮಿತಿ, ರಾಷ್ಟ್ರೀಯ ನಾಯಕರು ತೀರ್ಮಾನಿಸುತ್ತಾರೆ. ಅದು ನಾಲ್ಕು ಗೋಡೆ ಮಧ್ಯೆ ತೀರ್ಮಾನವಾಗುತ್ತದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಕಚೇರಿ ಉದ್ಘಾಟನೆ ವಿಚಾರಕ್ಕೆ ಉಪ್ಪು-ಹುಳಿ-ಖಾರ ಹಾಕಲಾಗುತ್ತಿದೆ. ಯಾವುದೇ ಲಿಂಗಾಯತ ನಾಯಕರ ಸಭೆಯೂ ನಡೆದಿಲ್ಲ. ನಾನು ಯಾರನ್ನೂ ಕರೆದಿಲ್ಲ. ಕೇಂದ್ರ ಸಚಿವರನ್ನು ಮಾತ್ರ ಕರೆದಿದ್ದೇನೆ. ನಾನು ನಮ್ಮ ನೆಂಟರನ್ನೇ ಕರೆದಿಲ್ಲ. ಆದರೂ, ಅಲ್ಲಿ ಸಭೆ ಮಾಡುತ್ತೇನೆಂದು ಉಪ್ಪು, ಹುಳಿ, ಖಾರ ಹಾಕಲಾಗುತ್ತಿದೆ. ಪಕ್ಷದಲ್ಲಿ ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ ಎಂದು ತಿಳಿಸಿದರು.
ನನ್ನ ಕಚೇರಿ ಉದ್ಘಾಟನೆಗೆ ಕೇಂದ್ರ ಸಚಿವರನ್ನು ಮಾತ್ರ ಕರೆದಿದ್ದೇನೆ. ಅಲ್ಲಿ ಯಾರನ್ನೂ ಕರೆದಿಲ್ಲ. ಪಕ್ಕದಲ್ಲೇ ಇರುವ ನನ್ನ ಬೀಗರನ್ನೂ ಕರೆದಿಲ್ಲ. ಅಂತಹದ್ದರಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಟೀಂ, ಮತ್ತೊಂದು ಟೀಂ ಬರುತ್ತದೆ ಅಂತೆಲ್ಲಾ ಉಪ್ಪು, ಹುಳಿ, ಖಾರವನ್ನೆಲ್ಲಾ ಹಾಕಿ, ಸುದ್ದಿ ಹರಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.