ರಾಜ್ಯಪಾಲರ ಕಾರ್ಯಕ್ರಮ ರದ್ದು

0
28

ಬಳ್ಳಾರಿ: ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸೆ.೬ ರಂದು ಆಗಮಿಸಬೇಕಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮ ದಿಢೀರ್ ರದ್ದಾಗಿದೆ.
ವಿವಿಯಿಂದ ಮೂವರಿಗೆ ಡಾಕ್ಟರೇಟ್ ಪ್ರದಾನ ವಿವಿಧ ಸ್ನಾತಕ, ಸ್ನಾತಕೋತ್ತರ ವಿಭಾದಲ್ಲಿ ಪದಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಆಗಮಿಸಬೇಕಿದ್ದ ರಾಜ್ಯಪಾಲರು. ಆದರೆ ರಾಜ್ಯಪಾಲರ ವಿರುದ್ದ ಎಲ್ಲೇಡೆ ಪ್ರತಿಭಟನೆ ನಡೆದಿದ್ದು, ಬಳ್ಳಾರಿಯಲ್ಲೂ ಸಿಎಂ ವಿರುದ್ದ ಪಾಸಿಕ್ಯೂಸಿನ್ ಅನುಮತಿ ವಿರೋಧಿಸಿ ಹಲವು ಸಂಘಟನೆಗಳಿಂದ ರಾಜ್ಯಪಾಲರ ವಿರುದ್ದ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿತ್ತು. ಶೋಷಿತ ಸಮುದಾಯಗಳ ‌ಒಕ್ಕೂಟದಿಂದ ಗೋ ಬ್ಯಾಕ್ ಗವರ್ನರ್ ಚಳವಳಿ ಹಾಗೂ ಕಪ್ಪು ಬಾವುಟ ಪ್ರದರ್ಶನಕ್ಕೆ ನಿರ್ಧರಿಸಲಾಗಿತ್ತು. ಇದರಿಂದ ಅಲಟ್೯ ಆಗಿದ್ದ ಜಿಲ್ಲಾ ಪೊಲೀಸ್ ಇಲಾಖೆ ನಿನ್ನೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಿತ್ತು. ಪೊಲೀಸ್ ಪರೇಡ್ ರಿಹರ್ಷಲ್ ನಡೆಸಿತ್ತು. ಆದರೆ ಈಗ ಗವರ್ನರ್ ಬಳ್ಳಾರಿಗೆ ಆಗಮಿಸುವ ಕಾರ್ಯಕ್ರಮ ರದ್ದಾಗಿದೆ.

Previous articleನಟಿ ಉಮಾಶ್ರೀ ಸೇರಿ ಮೂವರಿಗೆ ಗೌರವ ಡಾಕ್ಟರೇಟ್‌
Next articleಕರ್ನಾಟಕಕ್ಕೆ ಯೋಗಿ ಆದಿತ್ಯನಾಥರಂತಹ ನಾಯಕರು ಬೇಕು