ರಾಜ್ಯದ ರೈಲ್ವೆ ಯೋಜನೆಗಳಿಗೆ ವೇಗದ ಸ್ಪರ್ಶ

0
19

ಬೆಂಗಳೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣನವರೊಂದಿಗೆ ರಾಜ್ಯ ಸಚಿವ ಎಂ.ಬಿ ಪಾಟೀಲ್ ಇಂದು #BSRP, ಮೆಟ್ರೊ ಸಂಪರ್ಕ ಸೇವೆ ಸೇರಿದಂತೆ ರಾಜ್ಯದ ರೈಲ್ವೆ ಯೋಜನೆಗಳ ಕುರಿತು ಮಹತ್ವದ ಸಭೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮನ್ವಯತೆಯಿಂದ ಮುನ್ನಡೆದು ಪ್ರಗತಿಯಲ್ಲಿರುವ ಹಾಗೂ ನೂತನವಾಗಿ ಯೋಜಿಸಲಾಗಿರುವ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಕುರಿತು ಚರ್ಚಿಸಿದ್ದಾರೆ.

ಯೋಜನೆಗಳ ಕ್ಷಿಪ್ರ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುತ್ತೇವೆಂದು ಸಚಿವ ವಿ. ಸೋಮಣ್ಣರವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ನಾನು ಸರ್ಕಾರದ ಪರವಾಗಿ ಹಾಗೂ ರಾಜ್ಯದ ಪರವಾಗಿ ಧನ್ಯವಾದ ತಿಳಿಸಿದೆ, ಯೋಜನೆಗಳಿಗೆ ಅಗತ್ಯವಿರುವ ಭೂಸ್ವಾದೀನ ಪ್ರಕ್ರಿಯೆ ಸೇರಿದಂತೆ ಇನ್ನಿತರ ತೊಡಕುಗಳನ್ನು ನಾವು ಶೀಘ್ರ ಬಗೆಹರಿಸಲಿದ್ದೇವೆ ಎಂದು ಈ ವೇಳೆ ತಿಳಿಸಿದೆ. ನಂತರ ನಡೆದ ಜಂಟಿ ಮಾಧ್ಯಮ ಗೋಷ್ಠಿ ಕುರಿತ ವಿವರಗಳನ್ನು ರಾಜ್ಯ ಸಚಿವ ಎಂ.ಬಿ ಪಾಟೀಲ್ ಹಂಚಿಕೊಂಡಿದ್ದಾರೆ.

ಮುಖ್ಯಾಂಶಗಳು:

  • ಮಂಗಳೂರು-ಕಾರವಾರ ಬಂದರುಗಳನ್ನು ಸುಲಭವಾಗಿ ತಲುಪಲು ಅನುಕೂಲ ಕಲ್ಪಿಸುವ ಸಂಪರ್ಕಜಾಲವನ್ನು ಬಲಗೊಳಿಸಲಾಗುವುದು.
    •ವಿಜಯಪುರ-ಬೆಂಗಳೂರು ರೈಲ್ವೆ ಪ್ರಯಾಣವನ್ನು 14 ಗಂಟೆಗಳಿಂದ 10ಗಂಟೆಗಳಿಗೆ ಇಳಿಸಲು ಯೋಜನೆ
    •ರಾಜ್ಯದ ಎಲ್ಲ ರೈಲ್ವೆ ಮೇಲು ಸೇತುವೆ, ಹಾಗೂ ರೈಲ್ವೆ ಅಂಡರ್ ಪಾಸ್ ಗಳನ್ನು ಕೇಂದ್ರ ಸರ್ಕಾರವೇ ಪೂರ್ಣಗೊಳಿಸಲಿದೆ.
    •BSRP, ಮೆಟ್ರೊ ಹಾಗೂ ರೈಲ್ವೆ ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ಹಿಸಲು 6 ಉನ್ನತಾಧಿಕಾರಿಗಳ ಸಮನ್ವಯ ಸಮಿತಿಯ ರಚನೆ
Previous articleಸಿಎಂ ಆಕಾಂಕ್ಷಿಯಾದರೂ ಸಿದ್ದು ಆಶೀರ್ವಾದ ಅವಶ್ಯ
Next articleಕರ್ನಾಟಕದಲ್ಲಿ ಶೇ. ೮೫.೨೩ ಕಡು ಬಡವರು!