ರಾಜ್ಯದ ಪ್ರತಿ ಶಾಲೆಯಲ್ಲಿ ಪರಿಸರ ಕ್ಲಬ್

0
37

ಬೆಂಗಳೂರು: ಹಸಿರು ಪರಿಸರ ಬೆಂಗಳೂರಿನ ಆಸ್ತಿ. ಈ ಗಾರ್ಡನ್ ಸಿಟಿಯ ಹೆಸರನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಅದಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗೊಣ; ಹಸಿರ ಹಾದಿಯಲ್ಲಿ ನಡೆಯೋಣ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿಂದು ಆಯೋಜಿಸಲಾಗಿದ್ದ ಪರಿಸರ ನಡಿಗೆ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿ ಹೆಸರಾಗಲಿ ಹಸಿರು, ಉಸಿರಾಗಲಿ ಪರಿಸರ, ಪರಿಸರ ನಮ್ಮ ಮನೆ. ಅದನ್ನು ರಕ್ಷಣೆ ಮಾಡಬೇಕಾದುದು ನಮ್ಮ ಆದ್ಯ ಕರ್ತವ್ಯ. ಪರಿಸರ ಸಂರಕ್ಷಣೆ ಎಂದರೆ ದೇಶದ ರಕ್ಷಣೆಯಂತೆ. ಹಸಿರೇ ಉಸಿರು ಎಂದು ತಿಳಿದು ಮಾರಕ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕಾದುದು ನಮ್ಮ- ನಿಮ್ಮೆಲ್ಲರ ಜವಾಬ್ದಾರಿ. ಅದಕ್ಕಾಗಿ ಈಗಾಗಲೇ ಶಾಲೆಗಳಲ್ಲಿ ಕಡ್ಡಾಯವಾಗಿ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಹವಾಮಾನ ಕ್ರಿಯಾ ಬಳಗ ಮತ್ತು ಪರಿಸರ ಸಂಘಗಳನ್ನು ರಚಿಸಲು ಆದೇಶ ನೀಡಿದ್ದೇನೆ. ಒಂದೊಂದು ಶಾಲೆ ಒಂದೊಂದು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು, ಒಬ್ಬೊಬ್ಬ ವಿದ್ಯಾರ್ಥಿಯೂ ಒಂದೊಂದು ಗಿಡ ನೆಟ್ಟು ಪೋಷಿಸಬೇಕು ಎಂದರು.

Previous articleಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟಿಸಿದವರಾರು?
Next articleಸರ್ಕಾರ, ಕೂಡಲೇ ಪಲ್ಪ್ ಕೈಗಾರಿಕೆಗಳನ್ನು ಪ್ರಾರಂಭಿಸಲಿ