ನವದೆಹಲಿ: ರಾಜ್ಯದ ಜನಪದ ಕಲೆಯಾಗಿರುವ “ಹುಲಿ ವೇಷ ಕುಣಿತದ” ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಪ್ರತಿ ತಿಂಗಳು ಕೊನೆಯ ವಾರದಲ್ಲಿ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮದ 119ನೇ ಸಂಚಿಕೆಯಲ್ಲಿ ಮಾತನಾಡಿ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ಬಿಆರ್ಟಿ ಅರಣ್ಯವಿದೆ. ಬಿಆರ್ಟಿ ಅರಣ್ಯ ಅತಿಹೆಚ್ಚು ಹುಲಿಗಳಿರುವ ಪ್ರದೇಶವಾಗಿದೆ. ಹುಲಿಗಳನ್ನು ಉಳಿಸುವುದರಲ್ಲಿ ಸ್ಥಳೀಯ ಸೋಲಿಗರ ಪಾತ್ರ ದೊಡ್ಡದಿದೆ. ಹುಲಿಗಳನ್ನು ಉಳಿಸಿರುವ ಕ್ರೆಡಿಟ್ ಸ್ಥಳೀಯ ಸೋಲಿಗರಿಗೆ ಸಲ್ಲಬೇಕು. ಈಗಲೂ ಪ್ರಾಣಿ-ಮಾನವನ ಸಂಘರ್ಷ ನಡೆಯುತ್ತಲೇ ಇರುತ್ತದೆ. ಆದರೂ ಅದನ್ನು ಕಾಪಾಡಿಕೊಂಡು ಹೋಗಲಾಗುತ್ತಿದೆ ಹುಲಿ ಸಂರಕ್ಷಣೆ ಜೋತೆಗೆ ಹುಲಿ ವೇಷ ಕುಣಿತ ಹಾಗೂ ಹುಲಿ ವೇಷ ಹಾಕುವವರ ಬಗ್ಗೆ ಪ್ರಶಂಶೆ ವ್ಯಕ್ತ ಪಡಿಸಿದ್ದಾರೆ. ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನಲ್ಲಿ ಹುಲಿ ವೇಷ ತೊಟ್ಟು ಕುಣಿತದ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ ಎಂದಿದ್ದಾರೆ.