ರಾಜ್ಯದಲ್ಲಿ ಪ್ರಪ್ರಥಮ PCB ತಯಾರಿಕಾ ಘಟಕ

0
29

ರಾಜ್ಯದಲ್ಲಿ ಪ್ರಪ್ರಥಮ PCB ತಯಾರಿಕಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
‘ಕರ್ನಾಟಕ ಜಾಗತಿಕ ಹೂಡಿಕೆದಾರರ ಸಮಾವೇಶ 2025’ ಸಂಬಂಧ ವಿದೇಶಗಳ ಹೂಡಿಕೆದಾರರನ್ನು ಆಕರ್ಷಿಸಲು ಸಚಿವರ ನಿಯೋಗ ಪ್ಯಾರಿಸ್‌ಗೆ ಭೇಟಿ ನೀಡಿದೆ. ಬುಧವಾರ ಪ್ಯಾರಿಸ್‌ನಲ್ಲಿ ಸ್ನೈಡರ್‌ ಎಲೆಕ್ಟ್ರಿಕ್‌ನ ಉಪಾಧ್ಯಕ್ಷ ಬ್ರುನೊ ಟರ್ಚೆಟ್‌ ಅವರನ್ನು ಭೇಟಿಯಾದರು
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದು, ಜಾಗತಿಕ ಹೂಡಿಕೆ ಮತ್ತು ಹೊಸ ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿ ಕರ್ನಾಟಕದಲ್ಲಿ #Schneider Electric (ಶ್ನೈಡರ್ ಎಲೆಕ್ಟ್ರಿಕ್) ರಾಜ್ಯದಲ್ಲಿ ಪ್ರಪ್ರಥಮ PCB ತಯಾರಿಕಾ ಘಟಕ ಸ್ಥಾಪನೆ ಮಾಡಲು ಆಸಕ್ತಿವಹಿಸಿದೆ ಎಂದು ತಿಳಿಸಿದ್ದಾರೆ, ಇದರಿಂದಾಗಿ 5,000+ ಉದ್ಯೋಗ ಅವಕಾಶಗಳು ದೊರೆಯಲಿದ್ದು, ರಾಜ್ಯದ ತಯಾರಿಕಾ ವಲಯವನ್ನು ಪ್ರೋತ್ಸಾಹಿಸಲು ಆಧುನಿಕ PCB ಘಟಕ ಸಹಕಾರಿಯಾಗಲಿದೆ, ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೆ ಮತ್ತಷ್ಟು ಬಲ ಬರಲಿದೆ ಎಂದು ತಿಳಿಸಿದ್ದಾರೆ.

Previous articleಲೈಫ್ ಗಾರ್ಡ್‌ಗಳಿಗೆ ಮೂಲ ಸೌಕರ್ಯ ನೀಡಲಿ
Next articleಶರಾವತಿ ಸಂತ್ರಸ್ತರ ಸಮಸ್ಯೆ : ಸಮಸ್ಯೆಯಾಗಿ ಉಳಿದುಕೊಂಡಿದೆ