ರಾಜ್ಯದಲ್ಲಿ ಇನ್ನೂ 800 ಬಸ್‌ಗಳು ರಸ್ತೆಗೆ

ವಿಜಯಪುರ(ದೇವರಹಿಪ್ಪರಗಿ): ಬರುವ ದಿನಗಳಲ್ಲಿ ಇನ್ನೂ 800 ಬಸ್ಸುಗಳು ರಸ್ತೆಗಿಳಿಯಲಿವೆ ಎಂದು ರಾಮಲಿಂಗಾರಡ್ಡಿ ಹೇಳಿದರು.
ಅವರು ಪಟ್ಟಣದ ದೇವರಹಿಪ್ಪರಗಿ ಬಸ್ಸಿನ ನಿಲ್ದಾಣಕ್ಕೆ ವೀರಶರಣ ಮಡಿವಾಳ ಮಾಚಿದೇವರ ಬಸ್ಸು ನಿಲ್ದಾಣವೆಂದು ನಾಮಕರಣ ಮಾಡಿ ಮಾತನಾಡಿ, ಶಕ್ತಿ ಯೋಜನೆಯಿಂದ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಪ್ರಯಾಣಿಕರಿಗೆ ಸಣ್ಣಪುಟ್ಟ ಸಮಸ್ಯೆಗಳಾಗುತ್ತಿದ್ದವು, ಇಷ್ಟರಲ್ಲಿಯೇ ಆ ಸಮಸ್ಯೆ ಬಗೆಹರಿಯಲಿದೆ ಎಂದರು.