ರಾಜಕೀಯ ಬಿಡುವ ಅವಶ್ಯಕತೆಯಿಲ್ಲ, ಸದ್ಯಕ್ಕೆ ಮೊದಲು ಮಂತ್ರಿ ಸ್ಥಾನ ಬಿಡಿ…

0
15

ಅನುದಾನ ಕೊಟ್ಟಿದ್ದಾರೆಯೇ? ಕೊಟ್ಟಿದ್ದರೆ ನಾನು ರಾಜಕೀಯ ಬಿಟ್ಟುಬಿಡುವೆ, ಪ್ರಹ್ಲಾದ ಜೋಶಿ ಬಿಡುತ್ತಾರೆಯೇ

ಬೆಂಗಳೂರು : ಸಿದ್ದರಾಮಯ್ಯನವರೇ. ನೀವು ರಾಜಕೀಯ ಬಿಡುವ ಅವಶ್ಯಕತೆಯಿಲ್ಲ ಸದ್ಯಕ್ಕೆ ಮೊದಲು ಮುಖ್ಯಮಂತ್ರಿ ಸ್ಥಾನ ಬಿಡಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಹಣಕಾಸು ಆಯೋಗ ಶಿಫಾರಸು ಮಾಡಿದ್ದ ವಿಶೇಷ ಅನುದಾನ ನೀಡಿದ್ದರೆ ರಾಜಕೀಯ ಬಿಟ್ಟುಬಿಡುವೆ, 11495 ಕೋಟಿ ರೂಪಾಯಿಗಳನ್ನ ಕೊಟ್ಟಿದ್ದಾರೆಯೇ? ಕೊಟ್ಟಿದ್ದರೆ ನಾನು ರಾಜಕೀಯ ಬಿಟ್ಟುಬಿಡುವೆ, ಪ್ರಹ್ಲಾದ ಜೋಶಿ ಬಿಡುತ್ತಾರೆಯೇ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಾಮಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯನವರೇ… ದೆಹಲಿಯಲ್ಲಿ ಇಂಟರ್ನ್ಯಾಷನಲ್ ಸೋಲಾರ್ ಅಲಯನ್ಸ್, ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ನನಗೆ ನಿಮ್ಮ ಹೇಳಿಕೆ ಗಮನಕ್ಕೆ ಬಂದಿದೆ.
ಕರ್ನಾಟಕಕ್ಕೆ ಕೇಂದ್ರದಿಂದ ಸಲ್ಲಬೇಕಾದ ಎಲ್ಲ ಅನುದಾನವೂ ಸಂದಿದೆ, ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಹೆಚ್ಚಿನ ಅನುದಾನದ ಬಗ್ಗೆ ನಿಮಗೆ ಅರಿವಿದೆ, ಇದರ ಅಂಕಿ ಸಂಖ್ಯೆಗಳ ಸಮೇತ ಈ ಹಿಂದೆ ಹಲವಾರು ಬಾರಿ ಹೇಳಿದ್ದಾಗಿದೆ.

ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ, ಭ್ರಷ್ಟಾಚಾರ, ರೈತರ ಆತ್ಮಹತ್ಯೆ, ರೈತರ ಜಮೀನು ವಕ್ಫ್ ಗೆ, ಕಾನೂನು ಸುವ್ಯವಸ್ಥೆ ಕುಸಿತ, ಹಾಲು, ಪೆಟ್ರೋಲ್, ಡೀಸೆಲ್ ದರ ಏರಿಕೆ, ವಿದ್ಯುತ್ ದರ ಏರಿಕೆ … ಒಂದೇ ಎರಡೇ ನಿಮ್ಮ ಅದಕ್ಷ ಆಡಳಿತದ ಸರಮಾಲೆ…
ಗಮನ ಬೇರೆಡೆ ಸೆಳೆಯುವ ಹೇಳಿದ್ದ ಹೇಳೋ ಕಿಸಬಾಯಿ ದಾಸ ಅನ್ನೋ ತರಹ ಆಗಿದೆ ನಿಮ್ಮ ಆಪಾದನೆ. ನೀವು ರಾಜಕೀಯ ಬಿಡುವ ಅವಶ್ಯಕತೆಯಿಲ್ಲ ಸದ್ಯಕ್ಕೆ ಮೊದಲು ಮುಖ್ಯಮಂತ್ರಿ ಸ್ಥಾನ ಬಿಡಿ. ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಡಿ!! ಎಂದಿದ್ದಾರೆ.

Previous articleನೈಸರ್ಗಿಕ ಸಂಪತ್ತಿನ ಮೇಲೆ ಕಣ್ಣಿಟ್ಟವರಿಗೆ ಮತ ಕೊಡಬೇಡಿ
Next articleಅಬಕಾರಿ ಇಲಾಖೆಯಲ್ಲಿ ₹500 ಕೋಟಿ ಲೂಟಿ!