ರಾಕೇಶ್​ ಸಿದ್ದರಾಮಯ್ಯ ಸಾವಿಗೆ ಬೈರತಿ ಸುರೇಶ್​ ಕಾರಣ!

0
15

ನವದೆಹಲಿ: ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಅವರ ಸಾವಿನಲ್ಲಿ ಶೋಭಾ ಕರಂದ್ಲಾಜೆ ಅವರ ಪಾತ್ರವಿದೆ ಎಂದು ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಸುರೇಶ್ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ನವದೆಹಲಿ ಮಾತನಾಡಿದ ಅವರು ರಾಕೇಶ್ ಸಿದ್ದರಾಮಯ್ಯ ಸಾವಿಗೆ ಸಚಿವ ಭೈರತಿ ಸುರೇಶ್ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಆ ಮಾತನ್ನು ಹೇಳಲಾ, ದರೋಡೆಕೋರರನ್ನು ಪೊಲೀಸರು ಹಿಡಿತಾರೆ. ದರೋಡೆಕೋರರು ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಗುಂಡು ಹಾರಸಿಸ್ತಾರೆ. ಬೈರತಿ ಸುರೇಶ್ ಕೂಡ ಅದೇ ಕೆಲಸ ಮಾಡುತ್ತಾರೆ. ದರೋಡೆಕೋರ, ಭಯೋತ್ಪಾಕರ ಕೆಲಸವನ್ನು ಸುರೇಶ್ ಮಾಡಿದ್ದಾರೆ. ಸಿದ್ದರಾಮಯ್ಯ ಇಂತಹವರನ್ನು ಯಾಕೆ ಇಟ್ಟುಕೊಂಡಿದ್ದಾರೆ. ಕೌರವರ ಜೊತೆ ಶಕುನಿ ಯಾಕೆ ಇದ್ದ? ಅದೇ ರೀತಿ ಸಿದ್ದರಾಮಯ್ಯ ಅವರನ್ನು ಮುಗಿಸಲೇಂದೆ ಸುರೇಶ್ ಇದ್ದಾರೆ. ಸುರೇಶ್ ಭಯದಿಂದ ಇಂತಹ ಆರೋಪ ಮಾಡಿದ್ದಾರೆ, ನಿಮ್ಮನ್ನು ಹೆಬ್ಬಾಳದಿಂದ ಓಡಿಸುವ ಕೆಲಸ ಮಾಡುತ್ತೇನೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಡತಗಳನ್ನು ಸುಟ್ಟಾಕಿದ್ದನ್ನು ಹೇಳೊಕೆ ಬಂದರೆ ನೀವು ನನ್ನ ಮೇಲೆ ಹೀಗೆ ಆರೋಪ ಮಾಡ್ತಿರಾ? ಶೋಭಾ ಕರಂದ್ಲಾಜೆ ಎಂದಿಗೂ ಆರೋಪಕ್ಕೆ ಹೆದರಿ ಓಡಿ ಹೋಗುವವಳಲ್ಲ. ನಾಲಿಗೆ ಬಿಗಿ‌ ಹಿಡಿದು ಮಾತನಾಡಿ. ಸಿದ್ದರಾಮಯ್ಯ ಕುಟುಂಬ ಹಾಳಾಗಲು ಬೈರತಿ ಸುರೇಶ್ ಕಾರಣ. ನನ್ನ ಮೇಲೆ ಅಪವಾದ ಹೊರಿಸಲು ಬಹಳ ಹುಡುಕಿದ್ದೀರಿ, ಏನು ಸಿಕ್ಕಿಲ್ಲ. ಅದಕ್ಕಾಗಿ ಇಂತಹ ಚೀಪ್ ರಾಜಕಾರಣ ಮಾಡುತ್ತಿದ್ದೀರಿ, ಸಿದ್ದರಾಮಯ್ಯ ಅವರು ಯಾಕೆ ಇಂಥವರನ್ನು ಜೊತೆಗೆ ಇಟ್ಟುಕೊಂಡಿದ್ದಾರೆ ಎಂದರು.

Previous articleಬಘೀರ ಘರ್ಜನೆ ಜೋರು…
Next articleದೇಶದ ಸರಾಸರಿ ಜಿಎಸ್‌ಡಿಪಿಗಿಂತ ಏರುಗತಿಯಲ್ಲಿ ಕರ್ನಾಟಕದ ಆರ್ಥಿಕ ಪ್ರಗತಿ