ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರ ಸಾವು

0
114
ಅಪಘಾತ

ಬಳ್ಳಾರಿ: ನಗರದ ಏಳುಮಕ್ಕಳ ತಾಯಮ್ಮ ದೇವಸ್ಥಾನ ಬಳಿಯ ಮೇಲ್ಸೇತುವೆ ಮೇಲೆ ಬುಧವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಮಗು ತೀವ್ರವಾಗಿ ಗಾಯಗೊಂಡಿದೆ.
ತಾಲೂಕಿನ ಎರ‍್ರಗುಡಿ ಗ್ರಾಮದ ವೀರೇಶ್(೩೫), ಅಂಜಲಿ (೩೦), ಮಗ ದಿನೇಶ್ (೬) ಮೃತ ದುರ್ದೈವಿಗಳು. ಮಗಳು ಆದ್ಯ (೩) ತೀವ್ರವಾಗಿ ಗಾಯಗೊಂಡಿದ್ದು ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸ್ಥಳಕ್ಕೆ ಭೇಟಿ ನೀಡಿದ್ದ ಸಂಚಾರಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಲಾರಿ ಚಲಾಯಿಸಿದ್ದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪಘಾತ
Previous articleಗ್ರಾಮಸ್ಥರ ಧರ್ಮದೇಟಿಗೆ ಮಾನಸಿಕ ಅಸ್ವಸ್ಥ ಬಲಿ
Next articleಹುನಗುಂದ ಪುರಸಭೆಯಲ್ಲಿ ಧರ್ಮ ಸಂಘರ್ಷ