ರವಿ, ಲಕ್ಷ್ಮೀ ಪ್ರಕರಣ ಶೀಘ್ರ ಸುಖಾಂತ್ಯ

0
10

ಹುಬ್ಬಳ್ಳಿ: ವಿ.ಪ. ಸದಸ್ಯ ಸಿಟಿ ರವಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ನಡುವಿನ ಜಟಾಪಟಿಯನ್ನು ಬಜೆಟ್ ಅಧಿವೇಷನದಲ್ಲಿ ಬಗೆ ಹರಿಸಲು ಯೋಚಿಸಿದ್ದೇವೆ. ಈ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ದೂರವಾಣಿ ಕರೆ ಮಾಡಿದ್ದೆ. ಅವರು ಕರೆ ಸ್ವೀಕರಿಸಲಿಲ್ಲ ಎಂದು ವಿ.ಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರ ಜಗಳದ ವಿಷಯ ನೀತಿ ನಿರೂಪಣಾ ಕಮೀಟಿಗೆ ಹೋಗಿದೆ. ಅಲ್ಲಿಂದ ಯಾವುದೇ ಮಾಹಿತಿ ಬಂದಿಲ್ಲ. ಸಧ್ಯದಲ್ಲೇ ಸಭೆ ಕರೆಯಬಹುದು ಎಂದರು.

ಪ್ರಕರಣವನ್ನು ಸುಖಾಂತ್ಯಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ‌. ಇಲ್ಲದಿದ್ದರೆ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿ ಉಳಿಯುತ್ತದೆ. ಎಮೋಷನಲ್ ಆಗಿ ಇದ್ದಾಗ ಏನೋ ಆಗಿರತ್ತೆ. ಅದು, ಸದನದಲ್ಲಿ ಆಗಿದ್ರೆ ನಾನು ಅದನ್ನು ಅಲ್ಲೆ ಬಗೆಹರಿಸುತ್ತಿದೆ. ಇದನ್ನು ಎಂಡ್ ಮಾಡಬೇಕು ಎಂದರು.

Previous article20 ತಿಂಗಳುಗಳಲ್ಲಿ ಗುದ್ದಲಿ ಪೂಜೆ ಮಾಡಿಲ್ಲ
Next articleವಿಜಯಪುರ ಜಿಲ್ಲೆಗೆ ಲಕ್ಷ ಕೋಟಿ ಬಂಡವಾಳ ತರುವ ಗುರಿ!