ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ. ತನ್ನನ್ನು ನದಿಗೆ ಹೋಲಿಸಿಕೊಂಡು, ಬಿಜೆಪಿ ವಿರೋಧಿ ಬಣದ ಮುಖಂಡ ಯತ್ನಾಳ್ ಅವರನ್ನು ಕಸ, ಕಡ್ಡಿ, ಕಲ್ಲು, ಮುಳ್ಳಿಗೆ ಹೋಲಿಸಿದರು.
ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಗೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯೇಂದ್ರಗೆ ಸಣ್ಣಪುಟ್ಟ ಸಮಸ್ಯೆಯಾದಾಗ ಜಗದ್ಗುರುಗಳು ನೊಂದುಕೊಳ್ಳುತ್ತಾರೆ. ನದಿ ನೀರು ಹರಿಯುವಾಗ ಕಲ್ಲು-ಮುಳ್ಳು, ಕಸ-ಕಡ್ಡಿ ಸಿಗುತ್ತೆ ಯಾವುದನ್ನು ಲೆಕ್ಕಿಸದೆ ನದಿ ಹರಿದು ಗುರಿ ತಲುಪುತ್ತದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯತ್ನಾಳ್ ವಿರುದ್ಧ ಅಸಮಾಧಾನ ಹೊರಹಾಕಿದರು.
ಯಡಿಯೂರಪ್ಪನವರಿಗೂ ರಾಜಕೀಯದಲ್ಲಿ ತೊಂದರೆಯಾದಾಗ ಧೈರ್ಯ ತುಂಬಿದ್ದು ಜಗದ್ಗುರುಗಳು, ರಾಜಕೀಯದಲ್ಲಿ ತನ್ನ ಪರಿಸ್ಥಿತಿಯನ್ನು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ಗುರುಗಳಿಗೆ ತಿಳಿಸಿದರು.