ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ ಅಸ್ತಂಗತ

0
17

ಕೊಪ್ಪಳ(ಕುಕನೂರು): ಪಟ್ಟಣದ ಹಿರಿಯ ರಂಗಭೂಮಿ ಕಲಾವಿದ ಬಾಬಣ್ಣ ಕಲ್ಮನಿ(೮೪) ಅನಾರೋಗ್ಯದಿಂದ ಭಾನುವಾರ ಬೆಳಿಗ್ಗೆ ನಿಧನರಾದರು.
ಬಾಬಣ್ಣ ಕಲ್ಮನಿ ಅವರಿಗೆ ೨೦೨೧-೨೨ನೇ ಸಾಲಿನ ಗುಬ್ಬಿ ವೀರಣ್ಣ ಪ್ರಶಸ್ತಿ ಒಲಿದು ಬಂದಿತ್ತು. ಅವರು ಮುಡಿಗೇರಿಸಿಕೊಳ್ಳುವ ಮೊದಲೇ ಅಸ್ತಂಗತರಾಗಿದ್ದು, ರಂಗಭೂಮಿಗೆ ತುಂಬರಾದ ನಷ್ಟವಾಗಿದೆ.
ಬಾಬಣ್ಣ ಕಲ್ಮನಿ ೨-೧೧-೧೯೩೪ರಲ್ಲಿ ಜನಿಸಿದ್ದರು. ಹತ್ತನೇ ವಯಸ್ಸಿನಲ್ಲೇ ರಂಗಭೂಮಿ ಪ್ರವೇಶಿಸಿ ಸತತ ೭೭ ವರ್ಷ ಬಣ್ಣಹಚ್ಚಿದ ಹಿರಿಮೆ ಅವರದ್ದು. ಇಳಿವಯಸ್ಸಿನಲ್ಲಿಯೂ ಖಡಕ್ ಆಗಿ ರಂಗಭೂಮಿಯಲ್ಲಿ ನಟಿಸುತ್ತಿದ್ದ ಬಾಬಣ್ಣ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು. ಇವರ ಇಡೀ ಕುಟುಂಬವೇ ರಂಗಭೂಮಿಗೆ ಮೀಸಲು.

Previous articleಯತ್ನಾಳ ಭ್ರಮಾಲೋಕದಿಂದ ಹೊರ ಬನ್ನಿ
Next articleಬಿಜೆಪಿ ನೀರಿನಿಂದ ಹೊರ ಬಿದ್ದ ಮೀನು