ಯೋಧರಿಗೆ ಒಳಿತಾಗಲೆಂದು ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬಾದಾಮಿ: ಭಾರತ ದೇಶದ ಹೆಮ್ಮೆಯ ಯೋಧರ ರಕ್ಷಣೆಗೆ ಬಾದಾಮಿ ಬನಶಂಕರಿ ದೇವಸ್ಥಾನದಲ್ಲಿ ಶ್ರೀ ಬನಶಂಕರಿ ದೇವಿಗೆ ಅರ್ಚಕ ಪೂಜಾರ ಬಂಧುಗಳು ಸಮಸ್ತ ದೇಶವಾಸಿಗಳ ಪರವಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯನ್ನು ಶ್ಲಾಘಿಸಿ ನಾಡಿನಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದಿದ್ದು. ಭಾರತೀಯ ಸೈನಿಕರಿಗೆ ಶಕ್ತಿ ತುಂಬಲು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಗಡಿಯಲ್ಲಿ ದೇಶಕ್ಕಾಗಿ ಸೇವೆ ಮಾಡುತ್ತಿರುವ ಸೈನಿಕರಿಗೆ ಶಕ್ತಿ ತುಂಬುವ ಸಲುವಾಗಿ ಪ್ರಾರ್ಥನೆ ಸಲ್ಲಿಸಲಾಯಿತು.