ಯುವಕನ ಕೊಲೆ: ಆರೋಪಿ ಬಂಧನ

0
17
ಬಂಧನ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಯುವಕನನ್ನು ಕೊಲೆ ಮಾಡಿ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಕೊಲೆ‌ ಆರೋಪಿಯನ್ನು ಬಂಧಿಸಿದ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಿಲ್ಲತ್ ನಗರದ ನಿವಾಸಿ ಸೈಯದ್ ಅಜರ್ ಎಂಬಾತನನ್ನು ಬಂಧಿಸಲಾಗಿದೆ. ಸ್ನೇಹಿತ ವಿಜಯ ಬಸವ (25) ಎಂಬಾತನನ್ನು ಕೊಲೆ ಮಾಡಿ ಬೆಂಕಿ ಹಚ್ಚಲಾಗಿತ್ತು. ಘಟನೆಗೆ ಅನೈತಿಕ ಸಂಬಂಧವೇ ಕಾರಣ ಎನ್ನಲಾಗಿದೆ. ಈ ದ್ವೇಷದ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವುದಾಗಿ ಕರೆದೊಯ್ದು ತಲೆ ಮೇಲೆ ಕಲ್ಲುಹಾಕಿ, ಬೆಂಕಿ ಹಚ್ಚಿದ್ದ ಆರೋಪಿ ಪರಾರಿಯಾಗಿದ್ದನು.

Previous articleಜನತೆಗೆ ಬ್ಲ್ಯಾಕ್ ಮೇಲ್: ಚುನಾವಣಾ ಆಯೋಗಕ್ಕೆ ದೂರು
Next articleಕಲ್ಕಿ ಧಾಮದ ಶಂಕುಸ್ಥಾಪನೆ: ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಕಾಂಗ್ರೆಸ್ ನಾಯಕ