ಯುದ್ಧ ಬೇಡ: ಮೊದಲು ಪ್ರಚೋದನೆ ಹೇಳಿಕೆ ನಿಲ್ಲಿಸಿ


ದಾವಣಗೆರೆ: ಸಚಿವ ಜಮೀರ್ ಅಹಮ್ಮದ್ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಹೇಳಿದರೆ, ಆತ್ಮಹತ್ಯೆ ಬಾಂಬರ್ ಆಗಿ ಪಾಕಿಸ್ಥಾನಕ್ಕೆ ಹೋಗುತ್ತಾನಂತೆ. ಜಮೀರ್ ನೀನು ಯುದ್ಧ ಮಾಡುವುದು ಬೇಡಪ್ಪ. ದೇಶ ಕಾಯೋಕೆ ನಮ್ಮ ವೀರ ಯೋಧರಿದ್ದಾರೆ. ಮೊದಲು ನಿನ್ನ ಪ್ರಚೋದನಾ ಹೇಳಿಕೆ ನಿಲ್ಲಿಸಿದರೆ ಸಾಕು ಮಹಾ ನುಭಾವ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಲೇವಡಿ ಮಾಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಚೋದನೆಯ ಭಾಷಣವನ್ನು ಮಾಡಿ, ಕಲ್ಲು ಹೊಡೆಸಿದ್ದ ಮಹಾನ್ ವ್ಯಕ್ತಿ ಸಚಿವ ಜಮೀರ್ ಅಹಮ್ಮದ್ ಯುದ್ಧಕ್ಕೇನು ಹೋಗುವುದು ಬೇಡ ಎಂದರು.