ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶರಣಾಗುವ ಮುನ್ಸೂಚನೆ ನೀಡಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಲೋಕಸಭೆಯಲ್ಲಿ ಸೋತರೆ ಗ್ಯಾರೆಂಟಿ ರದ್ದು ಎಂದು ಹೇಳಿರುವ ಕಾಂಗ್ರೆಸ್ ಶಾಸಕ ಎಚ್. ಸಿ. ಬಾಲಕೃಷ್ಣ ಅವರು ಕರ್ನಾಟಕ ಕಾಂಗ್ರೆಸ್ ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶರಣಾಗುವ ಮುನ್ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಗ್ಯಾರೆಂಟಿಗಳು ಕೇವಲ ಜನರ ಮತ ಸೆಳೆಯಲು ಸೃಷ್ಟಿಸಿದ ಗಾಳಗಳೇ ಹೊರತು ಜನರ ಬದುಕು ರೂಪಿಸುವ ಶಾಶ್ವತ ಯೋಜನೆಗಳಲ್ಲ. ಭಾರತೀಯರ, ಕನ್ನಡಿಗರ ವಿಶ್ವಾಸ, ನಂಬಿಕೆ ಏನಿದ್ದರೂ ಅದು ಮೋದಿ ಗ್ಯಾರೆಂಟಿ ಮೇಲೆಯೇ ಹೊರತು ಕಾಂಗ್ರೆಸ್ ಗ್ಯಾರೆಂಟಿ ಮೇಲಲ್ಲ ಎಂದು ಬರೆದುಕೊಂಡಿದ್ದಾರೆ.