ಬೆಂಗಳೂರು: ಯುಜಿಸಿಇಟಿ-25 ಪ್ರವೇಶ ಸಲುವಾಗಿ ನಡೆಸುವ ಮೂಲ ದಾಖಲೆಗಳ ಪರಿಶೀಲನೆಗೆ ಮತ್ತೊಮ್ಮೆ ಅವಕಾಶ ನೀಡಲಾಗುವುದು. ಈ ವಿಷಯದಲ್ಲಿ ಆತಂಕ ಬೇಡ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು #UGCET-25 ದಾಖಲೆ ಪರಿಶೀಲನೆ ಸದ್ಯ #KEA ಕಚೇರಿಯಲ್ಲಿ ನಡೆಯುತ್ತಿದ್ದು, ಸೇನಾ ಉದ್ವಿಗ್ನತೆಯಿಂದ #JammuKashmir ದ ಕೆಲವರಿಗೆ ಭಾಗವಹಿಸಲು ಸಾಧ್ಯವಾಗಿಲ್ಲ. ಅಂತಹವರಿಗೆ ವಿಶೇಷವಾಗಿ ಅವಕಾಶ ನೀಡಲಾಗುತ್ತದೆ. ಈ ರೀತಿಯ ತೊಂದರೆಗೆ ಒಳಗಾದವರು ಯಾವುದೇ ಭಾಗದವರಿದ್ದರೂ ಅನುಕೂಲ ಕಲ್ಪಿಸಲಾಗುವುದು. ಆತಂಕ ಬೇಡ ಎಂದಿದ್ದಾರೆ.