(ಕ್ರೋಧಿನಾಮ ಸಂವತ್ಸರ ಏ.೯ರಿಂದ ಆರಂಭಗೊಳ್ಳಲಿದ್ದು ಶ್ರೀ ಶಕೆ ೧೯೪೬, ೨೦೨೪-೨೫ ದ್ವಾದಶ ರಾಶಿ ಭವಿಷ್ಯ ಇಂತಿದೆ…)
ಮೇಷ : ಚೂ ಚೇ ಚೊ ಲಾ ಲೀ ಲು ಲೇ ಲೊ ಆ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ ರವರೆಗೆ ಜನ್ಮಸ್ಥನಾಗಿ ಮೇಷ ರಾಶಿಯಲ್ಲಿ ಇರುವದರಿಂದ ಸಾಮಾನ್ಯ ಫಲ ನೀಡುವನು, ಗೌರವಾದರಗಳು ಕಡಿಮೆಯಾಗುವವು. ನಂಬಿದ ವ್ಯಕ್ತಿಗಳೇ ಶತ್ರುಗಳಾಗಿ ಪರಿಣಮಿಸುವರು. ಮಹತ್ವದ ಕೆಲಸ ಈ ವರ್ಷ ಬಿಡುವದೇ ಉತ್ತಮ. ಕೋರ್ಟ-ಕಛೇರಿ ಕೆಲಸಗಳನ್ನು ಕನಸಿನಲ್ಲಿಯೂ ನೆನಸದಿರಿ. ನಿಮ್ಮ ಮಿತ್ರರೇ ನಿಮಗೆ ಕೇಡು ಬಗೆಯುವರು. ಜನ್ಮಸ್ಥ ಗುರು ಇರುವುದರಿಂದ ಆರೋಗ್ಯದಲ್ಲಿ ತೊಂದರೆಯಾಗುವದು. ಈ ಸಮಯದಲ್ಲಿ ಸಮಯ ಸಾಧಕರು ನಿಮ್ಮನ್ನು ಮೋಸಿಸುವ ಪ್ರಸಂಗವಿದೆ, ಎಚ್ಚರಿಕೆಯಿಂದ ಜೀವನ ಸಾಗಿಸಿ. ರೈತರಿಗೆ ಈ ವರ್ಷ ಮುಂಗಾರಿ ಕೈ ಕೊಟ್ಟರೂ, ಹಿಂಗಾರಿ ತಕ್ಕ ಮಟ್ಟಿಗೆ ಬರುವುದು. ಜೋಳ, ಗೋದಿ, ಸರ‍್ಯಕಾಂತಿ ಉತ್ತಮವಾಗಿ ಬರುವುದು. ಮಹಿಳೆಯರಿಗೆ ಜನ್ಮಸ್ಥ ಗುರು ಇರುವುದರಿಂದ ಆರ್ಥಿಕ ತೊಂದರೆಯಾಗುವುದು. ದಿನಾಂಕ ೧-೫-೨೦೨೪ ರಿಂದ ೨ನೇಯವನಾಗಿ ವೃಷಭ ರಾಶಿಯಲ್ಲಿದ್ದು ವರ್ಷಪೂರ್ತಿ ಉತ್ತಮ ಫಲ ನೀಡುವನು. ಶನಿ ವರ್ಷಪೂರ್ತಿ ೧೧ನೇಯವನಾಗಿ ಕುಂಭರಾಶಿಯಲ್ಲಿದ್ದು ೨ನೇ ಗುರುವಿನ ಫಲಕ್ಕೆ ಇನ್ನಷ್ಟು ಉತ್ತಮ ಫಲಗಳನ್ನು ದೊರಕಿಸಿ ಧೈರ್ಯದಿಂದ ಕಾರ್ಯನಿರ್ವಹಿಸಲು ಅನವು ಮಾಡಿಕೊಡುವನು. ರಾಹು ಈ ವರ್ಷ ೧೨ನೇಯವನಾಗಿ ಮೀನ ರಾಶಿಯಲ್ಲಿದ್ದು ಸಾಮಾನ್ಯ ಫಲ ನೀಡುವನು. ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೧೧ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೧೨ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ಜನ್ಮಸ್ಥನಾಗಿ ಮೇಷ ರಾಶಿಯಲ್ಲಿರುವದರಿಂದ ಈ ಸಮಯದಲ್ಲಿ ಎಚ್ಚರಿಕೆಯಿಂದ ಜೀವನ ನಡೆಸಬೇಕು.
ವೃಷಭ : ಈ ಉ ಎ ಓ ವಾ ವಿ ವು ವೇ ವೋ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ ರವರೆಗೆ ೧೨ನೇವನಾಗಿ ಮೇಷ ರಾಶಿಯಲ್ಲಿರವದರಿಂದ ಬಂಧುಗಳಿಂದ ಮನಸ್ಸಿಗೆ ಸ್ವಲ್ಪ ಬೇಸರವಾಗುವುದು. ಹಣಕಾಸಿನ ವ್ಯವಹಾರಗಳಲ್ಲಿ ಗೆಲುವು ಕಾಣುವುದು. ಕೈಗೊಂಡ ಕೆಲಸಗಳು ಪೂರ್ಣವಾಗುವವು. ಆದರೆ ಅನಿರೀಕ್ಷಿತವಾಗಿ ಧನಹಾನಿಯ ಬಗ್ಗೆ ಎಚ್ಚರವಿರಲಿ. ದಿನಾಂಕ ೧-೫-೨೦೨೪ ರಿಂದ ವರ್ಷಪೂರ್ತಿ ಜನ್ಮಸ್ಥನಾಗಿ ಬರುವದರಿಂದ ಅಲ್ಪ ಪ್ರಮಾಣದ ಬದಲಾವಣೆ ಕಾಣಬಹುದೇ ಹೊರತು ಸಂಪೂರ್ಣ ಬದಲಾವಣೆ ಬಹು ಕಷ್ಟಸಾಧ್ಯ. ಈ ವರ್ಷ ಗುರುವಿನ ಸಾಧರಣದ ಫಲದ ನಡುವೆ ಶನಿ ವರ್ಷಪೂರ್ತಿ ೧೦ನೇಯವನಾಗಿ ಕುಂಭರಾಶಿಯಲ್ಲಿರುವದರಿಂದ ನಿಮ್ಮ ಧೈರ್ಯವೇ ನಿಮಗೆ ಹೆಚ್ಚಿನ ಯಶಸ್ಸು ಸಾಧಿಸಲು ಸಹಕಾರಿಯಾಗುವದು. ರಾಹು ಈ ವರ್ಷ ೧೧ನೇಯವನಾಗಿ ಮೀನ ರಾಶಿಯಲ್ಲಿದ್ದು ಪ್ರತಿಯೊಂದು ಕಾರ್ಯಗಳಲ್ಲಿ ಕಾರ್ಯಸಾಧನೆಗೆ ಬರುವ ಅಡ್ಡಿ ಆತಂಕಗಳನ್ನು ಎದುರಿಸಲು ಸಹಾಯ ಮಾಡುವನು ಮಂಗಳನು ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೧೦ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೧೧ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೧೨ನೇಯವನಾಗಿ ಮೇಷ ರಾಶಿಯಲಿದ್ದು, ನಂತರ ಜನ್ಮಸ್ಥನಾಗಿ ಬರುವದರಿಂದ ಈ ಸಮಯದಲ್ಲಿ ಎಚ್ಚರಿಕೆಯಿಂದ ಜೀವನ ನಡೆಸಬೇಕು. .
ಮಿಥುನ : ಕಾ ಕಿ ಕು ಘ ಙ ಛ ಕೇ ಕೊ ಹಾ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ ರವರೆಗೆ ೧೧ನೇಯವನಾಗಿ ಮೇಷ ರಾಶಿಯಲ್ಲಿದ್ದು ಮುಂದೆ ದಿನಾಂಕ ೧-೫-೨೦೨೪ ರಿಂದ ವರ್ಷಪೂರ್ತಿ ೧೨ನೇಯವನಾಗಿ ವೃಷಭ ರಾಶಿಯಲ್ಲಿದ್ದು, ವರ್ಷಾರಂಭದಲ್ಲಿ ಗುರುವಿನ ಸಂಪೂರ್ಣ ಫಲವಿದ್ದು ಸಂಕಲ್ಪಿತ ಕಾರ್ಯಗಳು ಕೈಗೂಡುವವು. ಸಾಧಿಸಬೇಕಾದ ಕಾರ್ಯವನ್ನು ಪ್ರಯತ್ನಪೂರ್ವಕವಾಗಿ ಮಾಡಿಕೊಳ್ಳುವಿರಿ. ಈ ಹಿಂದೆ ಬೇರೆಯವರಿಗೆ ನೀಡಿದ ಹಣ ಹಿಂತಿರುಗುವ ಸಮಯ ಇದಾಗಿದೆ. ಬಂಧು ಬಾಂಧವರು ನಿಮ್ಮ ಮನೆಯ ಸಂಭ್ರಮದ ಕಾರ್ಯಗಳಲ್ಲಿ ಭಾಗವಹಿಸಿ ಆನಂದಿಸುವರು. ಮಕ್ಕಳು ಕೂಡಾ ನಿಮ್ಮ ಕೆಲಸವನ್ನು ದ್ವಿಗುಣಗೊಳಿಸುವರು. ಪ್ರವಾಸದಲ್ಲಿ ಸೌಖ್ಯವಿದೆ. ತೀರ್ಥ ಯಾತ್ರೆಗಳನ್ನು ಮಾಡುವ ಸುಯೋಗ ಇದಾಗಿದೆ. ಶನಿ ವರ್ಷಪೂರ್ತಿ ೯ನೇ ಯವನಾಗಿ ಕುಂಭರಾಶಿಯಲ್ಲಿದ್ದು ವೈಭವವನ್ನು ಮರಳಿ ಪಡೆಯಲು ಪ್ರಯತ್ನಿಸುವಿರಿ. ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೯ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೧೦ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೧೧ನೇಯವನಾಗಿ ಮೇಷರಾಶಿಯಲ್ಲಿರುವನು, ನಂತರ ೧೨ನೇಯವನಾಗಿ ವೃಷಭರಾಶಿಯಲ್ಲಿರುವದರಿಂದ ಕಾರ್ಯಗಳಲ್ಲಿ ಯಶಸ್ಸು ಉಂಟಾಗುವದು. ರಾಹು ಈ ವರ್ಷ ೧೦ನೇಯವನಾಗಿ ಮೀನ ರಾಶಿಯಲ್ಲಿದ್ದು ಈ ಹಿಂದೆ ಗಳಿಸಿದ ಕೀರ್ತಿ, ಧನ ನಿಮ್ಮನ್ನು ಕಾಪಾಡುವುದು. ರಾಜಕಾರಣಿಗಳು ಕಣ್ಣು ಮುಚ್ಚಾಲೆ ಆಟ ಆಡುವುದು.
ಕರ್ಕ : ಹಿ ಹು ಹೇ ಹೋ ಡಾ ಡಿ ಡು ಡೇ ಡೋ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ ರವರೆಗೆ ೧೦ನೇವನಾಗಿ ಮೇಷ ರಾಶಿಯಲ್ಲಿದ್ದು, ದಿನಾಂಕ ೧-೫-೨೦೨೪ ರಿಂದ ವರ್ಷಪೂರ್ತಿ ೧೧ನೇಯವನಾಗಿ ವೃಷಭ ರಾಶಿಯಲ್ಲಿರುವದರಿಂದ ವರ್ಷದ ಪೂರ್ವಾರ್ಧಕ್ಕಿಂತಲೂ ವರ್ಷದ ಉತ್ತರಾರ್ಧದಲ್ಲಿ ಅತ್ಯತ್ತಮ ಫಲ ಪ್ರಾಪ್ತಿಯಾಗುವದು. ಮಡದಿ ಮಕ್ಕಳಿಂದ ಮಹತ್ವದ ಕೆಲಸಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವರು. ದೂರದ ಬಂಧುಗಳಿಗೆ ಅವರ ಕಷ್ಟದ ಸಮಯಕ್ಕೆ ನೀವು ನೆನಪಾಗುವಿರಿ. ವಸ್ತç ಹಾಗೂ ವಡವೆಗಳನ್ನು ಖರೀದಿಸುವ ಉತ್ತಮ ಯೋಗವಿದೆ. ಹೊಸ ಮನೆ ನಿರ್ಮಾಣ ಕಾರ್ಯಕ್ಕೆ ಇದು ಉತ್ತಮ ಸಂದರ್ಭ. ಮನೆಯಲ್ಲಿ ಮಂಗಲ ಕಾರ್ಯಗಳು ಅದ್ದೂರಿಯಾಗಿ ನಡೆಯುವವು. ರೈತರು ಹೊಸ ಯಂತ್ರೋಪಕರಣಗಳ ಬಳಕೆಯಲ್ಲಿ ಮುಂದಾಗುವರು ಇದರಿಂದ ಮುಂಗಾರಿ, ಹಿಂಗಾರಿಗಳು ಉತ್ತಮ ಫಲ ನೀಡುವವು. ಆರ್ಥಿಕವಾಗಿ ಉತ್ತಮ ಅನುಕೂಲತೆಗಳಾಗುವವು. ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೮ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೯ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೧೦ನೇಯವನಾಗಿ ಮೇಷರಾಶಿಯಲ್ಲಿರುವನು, ನಂತರ ೧೧ನೇಯವನಾಗಿ ವೃಷಭರಾಶಿಯಲ್ಲಿರುವದರಿಂದ ಮಂಗಳನಿಂದ ಮಿಶ್ರ ಫಲ ದೊರೆಯುವದು. ರಾಹು ಈ ವರ್ಷ ೯ನೇಯವನಾಗಿ ಮೀನ ರಾಶಿಯಲ್ಲಿದ್ದು ಗುರುವಿನ ಉತ್ತಮ ಫಲಕ್ಕೆ ಕಲಶವಿಟ್ಟಂತೆ ಕಾರ್ಯ ಸಾಧನೆಯಲ್ಲಿ ಧೈರ್ಯ ತುಂಬುವನು. ಧಾರ್ಮಿಕ ಕಾರ್ಯ ತತ್ಪರರಾಗಿ, ಕುಲದೇವರ ಆರಾಧನೆಯಿಂದ ಸರ್ವ ಕಾರ್ಯಗಳು ಯಶಸ್ವಿಯಾಗುವವು.
ಸಿಂಹ : ಮಾ ಮಿ ಮೂ ಮೇ ಮೊ ಟಾ ಟಿ ಟು ಟೇ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ ರವರೆಗೆ ೯ನೇವನಾಗಿ ಮೇಷ ರಾಶಿಯಲ್ಲಿದ್ದು ಅತ್ತ್ಯತ್ತಮ ಫಲ ನೀಡುವನು. ದಾಸ್ತಾನು ವಸ್ತುಗಳಿಗೆ ಉತ್ತಮ ಬೆಂಬಲ ಬೆಲೆ ಪ್ರಾಪ್ತವಾಗಿ ಉದ್ಯೋಗದಲ್ಲಿ ಲಾಭ ದ್ವಿಗುಣವಾಗುವದು. ನೌಕರದಾರರಿಗೆ ಈ ವರ್ಷ ಬಡತಿ ಯೋಗವಿದೆ. ಉತ್ತಮ ಸ್ಥಾನಕ್ಕೆ ವರ್ಗವಾಗುವದು ಹಾಗೂ ಅಧಿಕಾರಿಗಳಿಂದ ಪ್ರಶಂಶೆ ಇದೆ. ರೈತರಿಗೆ ಬೆಳೆದ ಬೆಳೆಗೆ ದ್ವಿಗುಣ ಫಲ ದೊರೆತು ಇಚ್ಛಿತ ಕಾರ್ಯ ಕೈಗೊಳ್ಳುವವು. ಹೆಸರು, ಶೇಂಗಾ, ಸೂರ್ಯಕಾಂತಿ ಉತ್ತಮ ಬೆಳೆ ಬರುವದು. ಮಹಿಳೆಯರಿಗೆ ಸರಕಾರಿ ಉದ್ಯೋಗದಲ್ಲಿ ಅವಕಾಶ ದೊರೆಯುವದು. ದಿನಾಂಕ ೧-೫-೨೦೨೪ ರಿಂದ ವರ್ಷಪೂರ್ತಿ ೧೦ನೇಯವನಾಗಿ ವೃಷಭ ರಾಶಿಯಲ್ಲಿರುವದರಿಂದ ಕೆಲ ಕಾರ್ಯದಲ್ಲಿ ಹಿನ್ನಡೆಯಾಗಬಹುದು. ಶನಿ ವರ್ಷಪೂರ್ತಿ ೭ನೇ ಯವನಾಗಿ ಕುಂಭರಾಶಿಯಲ್ಲಿದ್ದು ಆರಂಭದಲ್ಲಿ ಹಲ ಕೆಲವು ತೊಂದರೆಗಳನ್ನು ನೀಡುವನು. ವ್ಯರ್ಥ ಅಪವಾದ ಬಾರದೆ ಇರದು. ಬಂಧುಗಳು ತೊಂದರೆ ನೀಡುವರು. ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೭ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೮ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೯ನೇಯವನಾಗಿ ಮೇಷರಾಶಿಯಲ್ಲಿರುವನು, ನಂತರ ೧೦ನೇಯವನಾಗಿ ವೃಷಭ ರಾಶಿಯಲ್ಲಿರುವದರಿಂದ ಕಾಲ ಕಾಲಕ್ಕೆ ತಕ್ಕಂತೆ ಯೋಗ್ಯ ಫಲ ದೊರೆಯುವದು.
ಕನ್ಯಾ : ಟೋ ಪಾ ಪಿ ಪು ಷ ಣಾ ಠಾ ಪೇ ಪೋ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ ರವರೆಗೆ ೮ನೇಯವನಾಗಿ ಮೇಷ ರಾಶಿಯಲ್ಲಿದ್ದು ಸಂವತ್ಸರದ ಪ್ರಾರಂಭದಲ್ಲಿ ಕಾರ್ಯಗಳು ನಿಧಾನಗತಿ ಪ್ರಗತಿಯೊಂದಿಗೆ ಮುನ್ನಡೆಯುವವು. ಪ್ರಯತ್ನಕ್ಕೆ ನಿರೀಕ್ಷಿತ ಫಲ ಪ್ರಾಪ್ತವಾಗದಿದ್ದರೂ ಅಭಿವೃದ್ದಿ ಪಥದಲ್ಲಿ ಏರಿಕೆಯಾಗುವದು. ಆದರೆ ಹಣದ ವಿಚಾರದಲ್ಲಿ ಮನಸ್ಸಿಗೆ ಆತಂಕ ಉಂಟಾಗುತ್ತದೆ ಕೆಲವು ಘಟನೆಗಳಿಂದ ಮನಸ್ಸಿಗೆ ಬೇಸರವಾಗುವುದು. ಈ ಸಮಯದಲ್ಲಿ ಮನೆಯಲ್ಲಿಯ ಶಾಂತಿ ವಾತಾವರಣವನ್ನು ಕಾಪಾಡಿಕೊಳ್ಳುವದು ಉತ್ತಮ ಮುಂದಿನ ಮಾಸಗಳಲ್ಲಿ ಅಂದರೆ ದಿನಾಂಕ ೧-೫-೨೦೨೪ ರಿಂದ ವರ್ಷಪೂರ್ತಿ ಗುರು ೯ನೇಯವನಾಗಿ ವೃಷಭ ರಾಶಿಯಲ್ಲಿರುವದರಿಂದ ಅಭಿವೃದ್ಧಿ ವೇಗವನ್ನು ಪಡೆದುಕೊಳ್ಳುವದು. ಗುರು ೯ನೇಯವನಾಗಿ ಬಂದಾಗ ಅಲ್ಪ ಮಟ್ಟಿನ ಬದಲಾವಣೆ ಉಂಟಾಗುವದು. ಶನಿ ವರ್ಷಪೂರ್ತಿ ೬ನೇ ಯವನಾಗಿ ಕುಂಭರಾಶಿಯಲ್ಲಿದ್ದು ಕುಲದೇವರ ಅರಾಧನೆ ಮಾಡಿ ಕಾರ್ಯ ಆರಂಭಿಸಿರಿ “ಧೈರ್ಯಂ ಸರ್ವತ್ರ ಸಾಧನಂ” ಎಂಬಂತೆ ನೀವು ಸರ್ವ ಕಾರ್ಯ ಸಿದ್ದಿಸುವಿರಿ. ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೬ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೭ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೮ನೇಯವನಾಗಿ ಮೇಷರಾಶಿಯಲ್ಲಿರುವನು, ನಂತರ ೯ನೇಯವನಾಗಿ ವೃಷಭರಾಶಿಯಲ್ಲಿರುವದರಿಂದ ವಿಶೇಷವಾಗಿ ಅಷ್ಠಮ ಮಂಗಳ ಸಮಯದಲ್ಲಿ ಎಚ್ಚರದಿಂದರಬೇಕು.
ತುಲಾ : ರಾ ರಿ ರು ರೇ ರೋ ತಾ ತಿ ತು ತೇ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ ರವರೆಗೆ ೭ನೇವನಾಗಿ ಮೇಷ ರಾಶಿಯಲ್ಲಿದ್ದು ಈ ಸಮಯದಲ್ಲಿ ಜೀವನ ಪ್ರಗತಿ ಪಥದಲ್ಲಿ ಸಾಗುವದು. ವ್ಯಾಪಾರದಲ್ಲಿ ಲಾಭ ದೊರೆಯುವುದು. ವೈರಿಗಳು ಮಿತ್ರರಾಗುವರು. ಸಪ್ತಮನಾದ ಗುರುದೇವನು ಮಹತ್ವದ ಕೆಲಸ ಕಾರ್ಯಗಳಲ್ಲಿ ಜಯ ದೊರಕಿಸಿ ಕೊಡುವನು. ಮನೆಯಲ್ಲಿ ಮಡದಿ ಮಕ್ಕಳು ಸಂತೋಷದಿಂದ ನಿಮ್ಮ ಪ್ರತಿ ಕಾರ್ಯಕ್ಕೆ ಸಹಾಯ ಹಸ್ತ ಚಾಚುವರು.
ಶನಿ ವರ್ಷಪೂರ್ತಿ ಪಂಚಮನಾಗಿ ಕುಂಭರಾಶಿಯಲ್ಲಿದ್ದು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಉತ್ತಮ, ಆಘಾತ ಅಪಘಾತಗಳಿಂತ ಎಚ್ಚರವಿರಲಿ ನಿಧಾನವೇ ಪ್ರಾಧಾನ ಎಂಬ ನಿಯಮವನ್ನು ಪಾಲಿಸುವದು ಸೂಕ್ತ. ಹಿತ ಮಿತವಾದ ಆಹಾರ ಆರೋಗ್ಯಕ್ಕೆ ಉತ್ತಮ, ವಾಯುವಿಹಾರ ಆರೋಗ್ಯಕ್ಕೆ ಒಳ್ಳೆಯದು. ರೈತರಿಗೆ ಮುಂಗಾರಿ ಉತ್ತಮ ಫಲವಿದ್ದು. ಜೊತೆಗೆ ಮುಂಗಾರಿ ಹಿಂಗಾರಿ ಬೆಳೆಗಳಾದ ಜೋಳ, ಕಡಲೆ, ಸೂರ್ಯಕಾಂತಿ ಅತ್ಯುತ್ತಮವಾಗಿ ಬರುವದು. ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೫ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೬ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೭ನೇಯವನಾಗಿ ಮೇಷರಾಶಿಯಲ್ಲಿರುವನು, ನಂತರ ೮ನೇಯವನಾಗಿ ವೃಷಭರಾಶಿಯಲ್ಲಿರುವದರಿಂದ ಅಷ್ಟಮ ಮಂಗಳ ಕೆಲ ಕಾರ್ಯಗಳಲ್ಲಿ ಅನಾವಶ್ಯಕವಾಗಿ ಹಿನ್ನಡೆ ಉಂಟುಮಾಡುವನು.
ವೃಶ್ಚಿಕ : ತೋ ನಾ ನೀ ನು ನೇ ನೋ ಯಾ ಯಿ ಯೂ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ರವರೆಗೆ ೬ನೇವನಾಗಿ ಮೇಷ ರಾಶಿಯಲ್ಲಿದ್ದು ವರ್ಷಾರಂಭದಲ್ಲಿ ಗುರುವಿನಂದ ಸಾಮಾನ್ಯ ಫಲ ನಿರೀಕ್ಷಿಸಬಹುದಾಗಿದೆ. ಗುರು ದಿನಾಂಕ ೧-೫-೨೦೨೪ ರಿಂದ ವರ್ಷಪೂರ್ತಿ ೭ನೇಯವನಾಗಿ ವೃಷಭ ರಾಶಿಯಲ್ಲಿರುವದರಿಂದ ಬದಲಾವಣೆ ಪರ್ವ ಪ್ರಾರಂಭವಾಗುವದು. ನಿಮ್ಮ ಅಪೂರ್ಣ ಕಾರ್ಯಗಳು ಮರುಸ್ಥಾಪನೆಗೊಂಡು ಪೂರ್ಣಗೊಂಡು ಮನಸ್ಸಿಗೆ ಅವಶ್ಯಕ ನೆಮ್ಮದಿಯನ್ನು ನೀಡುವವು. ಶನಿ ವರ್ಷಪೂರ್ತಿ ೪ನೇ ಯವನಾಗಿ ಕುಂಭರಾಶಿಯಲ್ಲಿದ್ದು ಅಲ್ಪ ಪ್ರಮಾಣದಲ್ಲಿ ಅನವಶ್ಯಕ ಸಮಸ್ಯೆಗಳು ತಲೆದೊರುವವು. ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೪ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೫ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೬ನೇಯವನಾಗಿ ಮೇಷರಾಶಿಯಲ್ಲಿರುವನು, ನಂತರ ೭ನೇಯವನಾಗಿ ವೃಷಭರಾಶಿಯಲ್ಲಿರುವದರಿಂದ ಈ ವರ್ಷ ಮಂಗಳನಿಂದ ಸಮಯಕ್ಕೆ ಮತ್ತು ಕರ್ಮಕ್ಕನುಸಾರವಾಗಿ ಮಿಶ್ರ ಫಲಗಳನ್ನು ನಿರೀಕ್ಷಿಸಬಹುದಾಗಿದೆ.
ಧನು : ಯೇ ಯೋ ಭಾ ಭಿ ಭೂ ಧಾ ಫಾ ಢಾ ಭೆ
ಈ ರಾಶಿಯವರಿಗೆ ಗುರು ವರ್ಷಾರಂಭದಿAದ ದಿನಾಂಕ ೧-೫-೨೦೨೪ ರವರೆಗೆ ೫ನೇವನಾಗಿ ಮೇಷ ರಾಶಿಯಲ್ಲಿದ್ದು ವರ್ಷದ ಪೂರ್ವಾರ್ಧದಲ್ಲಿ ಉತ್ತಮ ಫಲವಿದೆ. ಮಹಿಳೆಯರಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ಜನರಿಂದ ಮತ್ತು ಜನ ಪ್ರತಿನಿಧಿಗಳಿಂದ ಅಮೋಘ ಬೆಂಬಲ ವ್ಯಕ್ತವಾಗಲಿದೆ. ಮುಂಗಾರಿ ಉತ್ತಮ ಫಲ ಪಡೆಯುವಿರಿ. ಹೆಸರು, ಸೂರ್ಯಕಾಂತಿ, ಆಲಸಂದಿ ಫಸಲು ಪಡೆಯುವಿರಿ. ಹಿಂಗಾರಿ ಪೀಕು ಸಾಮಾನ್ಯವಾಗಿ ಬರುವುದು. ಮುಂದೆ ದಿನಾಂಕ ೧-೫-೨೦೨೪ ರಿಂದ ವರ್ಷಪೂರ್ತಿ ಗುರು ೬ನೇಯವನಾಗಿ ವೃಷಭ ರಾಶಿಯಲ್ಲಿರುವದರಿಂದ ಈ ಸಮಯದಲ್ಲಿ ಮನಸ್ಸು ಸಂಶಯದ ಗೂಡಾಗಿ ಮಾಡುವ ಕಾರ್ಯದಲ್ಲಿ ಧೈರ್ಯ ಕುಂದಿದಂತೆ ಭಾಸವಾಗುವದು. ಶನಿ ವರ್ಷಪೂರ್ತಿ ೩ನೇ ಯವನಾಗಿ ಕುಂಭರಾಶಿಯಲ್ಲಿದ್ದು ವರ್ಷಪೂರ್ತಿ ಉತ್ತಮ ಫಲ ನೀಡುವನು. ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೩ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೪ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೫ನೇಯವನಾಗಿ ಮೇಷರಾಶಿಯಲ್ಲಿರುವನು, ನಂತರ ೬ನೇಯವನಾಗಿ ವೃಷಭರಾಶಿಯಲ್ಲಿರುವದರಿಂದ ಸಾಕಷ್ಟು ಏರಿಳಿತ ಕಾಣುವವು, ವಿಶೇಷವಾಗಿ ಜೂನ ಮತ್ತು ಜುಲೈ ತಿಂಗಳಲ್ಲಿ ಪಂಚಮ ಮಂಗಳ ಪ್ರಭಾವ ಅತಿಯಾಗಿರುವದರಿಂದ ಆರೋಗ್ಯ ಮತ್ತು ಮಾನಸಿಕ ಸ್ಥಿತಿಗತಿಯ ಮೇಲೆ ವಿಶೇಷ ಕಾಳಜಿ ವಹಿಸುವದು ಅತಿ ಸೂಕ್ತವಾಗಿದೆ.
ಮಕರ : ಭೋ, ಜಾ, ಜಿ, ಖಿ, ಖು, ಖೇ, ಖೋ, ಗಾ, ಗಿ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ ರವರೆಗೆ ೪ನೇವನಾಗಿ ಮೇಷ ರಾಶಿಯಲ್ಲಿದ್ದು, ವರ್ಷದ ಪೂರ್ವ ಭಾಗದ ಕೆಲ ದಿನಗಳ ಕಾಲ ಸಾಮಾನ್ಯ ಫಲವಿರುವದು. ಬಹು ಜಾಗರೂಕತೆಯಿಂದ ಮನೆತನ ನಡೆಸಿದಲ್ಲಿ ತೊಂದರೆ ಆಗಲಾರದು. ದೇವತಾರಾಧನೆ, ಗುರು-ಹಿರಿಯರ ಮಾರ್ಗದರ್ಶನದಿಂದ ಉತ್ತಮ ಫಲ ದೊರೆಯುವದು. ಕೋರ್ಟ ಕಛೇರಿ ಕೆಲಸ ಮುಂದೂಡಿರಿ. ನೆರೆ ಹೊರೆಯವರಿಂದ ಕಾರಣಗಳಿಲ್ಲದೆ ಕಿರಿಕಿರಿಯಾಗುವದು. ದಿನಾಂಕ ೧-೫-೨೦೨೪ ರಿಂದ ವರ್ಷಪೂರ್ತಿ ೫ನೇಯವನಾಗಿ ವೃಷಭ ರಾಶಿಯಲ್ಲಿರುವದರಿಂದ ಗ್ರಹಗತಿಗಳ ಅನುಸಾರವಾಗಿ ಪರಸ್ಥಿತಿ ಪ್ರತಿದಿನ ಸುಧಾರಿಸಿ ಅಭಿವೃದ್ದಿ ಹಾದಿ ಹಿಡಿಯುವದು. ಸರಕಾರಿ ಹಾಗೂ ಅರೆಸರಕಾರಿ ನೌಕರದಾರರಿಗೆ ಆರ್ಥಿಕವಾಗಿ ಸಬಲರಾಗುವರು. ಕೃಷಿಕರಿಗೆ ಮುಂಗಾರಿಯಲ್ಲಿ ಬಹಳ ಫಲ ದೊರೆಯದಿದ್ದರೂ, ಹಿಂಗಾರಿಯಲ್ಲಿ ಉತ್ತಮ ಫಸಲು ಪಡೆದು ಆದಾಯ ದ್ವಿಗುಣವಾಗುವದು. ರಾಹು ಈ ವರ್ಷ ೩ನೇಯವನಾಗಿ ಮೀನ ರಾಶಿಯಲ್ಲಿದ್ದು ನಿಮ್ಮ ಸಕಲ ಕಾರ್ಯಗಳಿಗೆ ಆನೆ ಬಲ ಬರುವದು.
ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೨ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೩ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೪ನೇಯವನಾಗಿ ಮೇಷರಾಶಿಯಲ್ಲಿರುವನು, ನಂತರ ೫ನೇಯವನಾಗಿ ವೃಷಭರಾಶಿಯಲ್ಲಿರುವದರಿಂದ ವರ್ಷದೂದ್ದಕ್ಕೂ ಸಮಸ್ತ ಕಾರ್ಯಗಳಿಗೆ ಸನ್ಮಂಗಲ ಉಂಟಾಗುವದು.
ಕುಂಭ : ಗು ಗೇ ಗೋ ಸಾ ಸಿ ಸು ಸೇ ಸೊ ದಾ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ ರವರೆಗೆ ೩ನೇವನಾಗಿ ಮೇಷ ರಾಶಿಯಲ್ಲಿದ್ದು, ದಿನಾಂಕ ೧-೫-೨೦೨೪ ರಿಂದ ವರ್ಷಪೂರ್ತಿ ೪ನೇಯವನಾಗಿ ವೃಷಭ ರಾಶಿಯಲ್ಲಿರುವದರಿಂದ ಗುರು ಗ್ರಹದಿಂದ ಹೆಚ್ಚು ಫಲವನ್ನು ನಿರೀಕ್ಷಿಸಲಾಗದು. ಆರಂಭದಲ್ಲಿ ಮೂರನೆ ಗುರು ಇದ್ದು, ನಾಲ್ಕನೇ ಗುರು ವರ್ಷಪೂರ್ತಿ ಸಾಮಾನ್ಯ ಫಲ ನೀಡುವನು. ಇದ್ದ ವೃತ್ತಿಯನ್ನು ನಿಷ್ಠೆಯಿಂಧ ಕಾರ್ಯ ನಿರ್ವಹಿಸಿ ಉದ್ಯೋಗ ಕಾಪಾಡಿಕೊಳ್ಳಿ, ವಿವಿಧ ರೀತಿಯ ಉದ್ಯಮೆದಾರರು ಉದ್ಯಮೆಯ ಸರ್ವ ಕಾರ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಿ, ಕುರುಡು ನಂಬಿಕೆಯಿಂದ ಕಾರ್ಯ ನಿರ್ವಹಿಸಿದರೆ ಆಸ್ತಿಯಲ್ಲಿ ಅಪಾರ ಹಾನಿಯಾಗಿ ಆರ್ಥಿಕ ಸಂಪತ್ತಿಗೆ ಧಕ್ಕೆಯಾಗುವದು. ಅನಾವಶ್ಯಕ ನಿಂದನೆ ಉಂಟಾದರೂ ಧೃತಿಗೆಡದೆ ಸಧೃಢವಾಗಿರಿ.
ಶನಿ ಜನ್ಮಸ್ಥನಾಗಿ ವರ್ಷಪೂರ್ತಿ ಕುಂಭರಾಶಿಯಲ್ಲಿದ್ದು ಹೊಸ ಉದ್ದಮದಲ್ಲಿ ಪ್ರಗತಿ ಅಷ್ಟಕ್ಕಷ್ಟೆ, ಮಿತ್ರರಿಂದ ಬರುವ ಹೊಸ ಯೊಜನೆಗಳಿಗೆ ನಿಮ್ಮಿಂದ ನಿರಾಶದಯಕ ಪ್ರತಿಕ್ರಿಯೆ ಮುಂದುವರೆಯುವದು. ನೌಕರದಾರರಿಗೆ ಬಡ್ತಿ ಯೋಗ ಕಡಿಮೆಯಿದ್ದು, ಕೇವಲ ಅಧಿಕಾರಿಗಳಿಂದ ಪ್ರಶಂಸನೆಗೆ ಒಳಗಾಗುವಿರಿ ಆದರೆ ಅದರಿಂದ ಹೆಚ್ಚಿನ ಲಾಭವನ್ನು ನಿರೀಕ್ಷಿಸಲಾಗದು. ಕೇವಲ ಪೊಳ್ಳು ಭರವಸೆಗಳು ನಿಮ್ಮ ಕೆಲ ಸಮಯವನ್ನು ಹಾಳುಮಾಡಲಿವೆ. ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೧ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ೨ನೇಯವನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೩ನೇಯವನಾಗಿ ಮೇಷರಾಶಿಯಲ್ಲಿರುವನು, ನಂತರ ೪ನೇಯವನಾಗಿ ವೃಷಭರಾಶಿಯಲ್ಲಿರುವನು.
ಮೀನ : ದಿ ದು ಥ ಝ ಞ ದೇ ದೋ ಚಾ ಚಿ
ಈ ರಾಶಿಯವರಿಗೆ ಗುರು ವರ್ಷಾರಂಭದಿಂದ ದಿನಾಂಕ ೧-೫-೨೦೨೪ ರವರೆಗೆ ೨ನೇವನಾಗಿ ಮೇಷ ರಾಶಿಯಲ್ಲಿದ್ದು ವರ್ಷದ ಪೂರ್ವ ಭಾಗದಲ್ಲಿ ಉತ್ತಮ ಫಲವನ್ನು ನಿರೀಕ್ಷಿಸಬಹುದಾಗಿದೆ. ವರ್ಷಾರಂಭದಲ್ಲಿ ಗುರು ಬಲ ಉತ್ತಮವಿರುವದರಿಂದ ಸಾಕಷ್ಟು ಅನುಕೂಲತೆಗಳಾಗುವವು.ಗುರು ಪ್ರಭಾವದಿಂದ ಸದಾ ಸಮಯ ಕಾರ್ಯ ಪ್ರವೃತ್ತರಾಗಿ, ಮನೆಯಲ್ಲಿ ಧನ-ಕನಕಾದಿಗಳು ತುಂಬಿ ತುಳುಕುವವು. ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ, ಜೊತೆಗೆ ಹೆಚ್ಚಿನ ಗೌರವ ಸನ್ಮಾನ ದೊರೆಯುವದು. ದಿನಾಂಕ ೧-೫-೨೦೨೪ ರಿಂದ ವರ್ಷಪೂರ್ತಿ ೩ನೇಯವನಾಗಿ ವೃಷಭ ರಾಶಿಯಲ್ಲಿರುವದರಿಂದ ವರ್ಷದ ಉತ್ತರಾರ್ಧದಲ್ಲಿ ಪ್ರಗತಿ ಕಾಣುವದು ಕಷ್ಟ ಸಾಧ್ಯ. ಅಲ್ಪ ಮಟ್ಟಿನಲ್ಲಿ ಬದಲಾವಣೆಯಾಗಿ ವ್ಯಾಪಾರ ವಹಿವಾಟಗಳು ತಟಸ್ಥ ರೀತಿಯಲ್ಲಿದ್ದು, ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು. ನೀವು ಮಾಡುವ ಪ್ರತಿಯೊಂದು ಕಾರ್ಯದಲ್ಲಿ ಶ್ರದ್ಧೆ ಮತ್ತು ನಿಷ್ಠೆ ಇರಲಿ, ಇಲ್ಲವಾದಲ್ಲಿ ಹಿರಿಯ ಅಧಿಕಾರಿಗಳಿಂದ ಅನಾವಶ್ಯಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನಿಮ್ಮ ದಕ್ಷತೆ, ಶಾಂತಿ ನಿಮ್ಮನ್ನು ಸರ್ವ ಸಮಯದಲ್ಲಿ ಕಾಪಾಡುವದು.
ಮಂಗಳ ವರ್ಷಾರಂಭದಿಂದ ದಿನಾಂಕ ೨೩-೪-೨೦೨೪ರವರೆಗೆ ೧೨ನೇಯವನಾಗಿ ಕುಂಭ ರಾಶಿಯಲ್ಲಿದ್ದು, ಅಲ್ಲಿಂದ ದಿನಾಂಕ ೧-೬-೨೦೨೪ರವರೆಗೆ ಜನ್ಮಸ್ಥನಾಗಿ ಮೀನರಾಶಿಯಲ್ಲಿದ್ದು, ದಿನಾಂಕ ೧೨-೭-೨೦೨೪ರವರಗೆ ೨ನೇಯವನಾಗಿ ಮೇಷರಾಶಿಯಲ್ಲಿರುವನು, ನಂತರ ೩ನೇಯವನಾಗಿ ವೃಷಭರಾಶಿಯಲ್ಲಿರುವದರಿಂದ ಸಾಕಷ್ಟು ಪರೀಕ್ಷಾ ಸಮಯಗಳು ಎದುರಾಗುವವು.