Home ತಾಜಾ ಸುದ್ದಿ ಯಾರೇ ಅಭ್ಯರ್ಥಿಯಾದರೂ ರೆಬಲ್ ಆಗುವ ಪ್ರಶ್ನೆಯೇ ಇಲ್ಲ

ಯಾರೇ ಅಭ್ಯರ್ಥಿಯಾದರೂ ರೆಬಲ್ ಆಗುವ ಪ್ರಶ್ನೆಯೇ ಇಲ್ಲ

0
95
ಆರ್‌. ಅಶೋಕ

ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಗೆ ಯಾರೇ ಅಭ್ಯರ್ಥಿಯಾದರೂ ರೆಬಲ್ ಆಗುವ ಪ್ರಶ್ನೆಯೇ ಇಲ್ಲ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಗಾಲೇ ಸಂಡೂರು ಹಾಗೂ ಶಿಗ್ಗಾಂವಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆಯೊಳಗೆ ಚನ್ನಪಟ್ಟಣಕ್ಕೆ ಎನ್ ಡಿಎ ಅಭ್ಯರ್ಥಿ ಘೋಷಿಸಲಾಗುವುದು. ಯಾರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಎನ್‌ಡಿಎ ಗೆಲುವು ಸಾಧಿಸಬೇಕು ಎನ್ನುವುದು ನಮ್ಮ ಗುರಿ ಎಂದಿದ್ದಾರೆ.