ಯತ್ನಾಳ, ಸೋಮಶೇಖರ ಬಗ್ಗೆ ಹೆಚ್ಚೆನು ಹೇಳಲಾರೆ

0
30

ಕಲಬುರಗಿ: ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎಸ್ ಟಿ.‌ಸೋಮಶೇಖರ ಬಗ್ಗೆ ದಿನ ಬೆಳಗಾದರೆ ಹೆಚ್ಚು ಮಾತನಾಡುವುದಕ್ಕೆ ಹೋಗುವುದಿಲ್ಲ. ಹೆಚ್ಚೆನು ಹೇಳಲಾರೆ. ಆದರೆ ಡಿ. ೭ ರಂದು ಪಕ್ಷದ ಕೋರ್ ಕಮಿಟಿ ಸಭೆ ಕರೆಯಲಾಗಿದ್ದು, ಆ ಸಭೆಯಲ್ಲಿ ಎಲ್ಲವೂ ಸರಿ ಹೋಗುವ ನಂಬಿಕೆ ಇದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ರೈತರ ಭೂಮಿಯನ್ನು ವಕ್ಫ್ ಮಂಡಳಿ ಭೂಕಬಳಿಕೆ ಮಾಡಿರುವುದನ್ನು ವಿರೋಧಿಸಿ ಹೋರಾಟಕ್ಕೂ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಸಂಸದ ಗೋವಿಂದ‌ ಕಾರಜೋಳ ನೇತೃತ್ವದಲ್ಲಿ ಜೆಪಿಸಿ ಕಮೀಟಿಗೆ ವರದಿ ಸಲ್ಲಿಸಲಾಗಿದೆ. ಜೆಪಿಸಿಗೆ ಯಾರೂ ಬೇಕಾದವರೂ ಮಾಹಿತಿ ನೀಡಬಹುದು ಎಂದು ಹೇಳಿದರು. ಆದರೆ ವಿಪಕ್ಷ ನಾಯಕ ಆರ್. ಅಶೋಕ ಅವರು ಪಕ್ಷದ ವರಿಷ್ಠರನ್ನು ಭೇಟಿ ಮಾಡುವುದಕ್ಕೆ ದೆಹಲಿಗೆ ಹೋಗಿರಬಹುದು ಹೊರತು ಹೆಚ್ಚಿನ ಮಾಹಿತಿ ನನಗೆ ಗೊತ್ತಿಲ್ಲ ಎಂದರು.

ಲೋಕಾಯುಕ್ತಕ್ಕೆ ವರದಿ : ಸಿಎಂ ಕುಟುಂಬಕ್ಕೆ ಅಕ್ರಮವಾಗಿ ಮುಡಾ ಸೈಟ್ ಬಂದಿದೆ. ನಾವು ಮೊದಲಿನಿಂದಲೂ ಹೇಳಿಕೊಂಡು ಬರುತ್ತಿದ್ದೇವೆ. ಬಡವರ ಸೈಟ್ ಗಳು ಬ್ರೋಕರ್‌ಗಳ ಪಾಲಾಗಿವೆ‌. ಇಡಿಯೇ ರೂ. 700 ಕೋಟಿ ಗೂ ಹೆಚ್ಚು ಹಗರಣ ಆಗಿದೆ ಎಂಬುದರ ಬಗ್ಗೆ ತಿಳಿಸಿದೆ. ಆದರೆ ಸಿಎಂ ಸಿದ್ದರಾಮಯ್ಯನವರು ಮುಡಾ ಬದಲಿ ಸೈಟ್ ಆರೋಪದಿಂದ ಹಿಂದೆ ಸರಿಯಲು ಸೈಟ್ ವಾಪಸ್ ನೀಡಿದ್ದಾರೆ ಎಂದರು.

ಸಚಿವ ಖರ್ಗೆ ಮೇಲೆ ವಿಶ್ವಾಸ ಇಲ್ಲ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಮೇಲೆ ಜಿಲ್ಲೆಯ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

Previous articleಮಾಜಿ ಡಿಸಿಎಂ ಸುಖ್​ಬೀರ್​ ಸಿಂಗ್ ಮೇಲೆ ಗುಂಡಿನ ದಾಳಿ
Next articleಬೆಂಗಳೂರಿನಿಂದ ಶಬರಿಮಲೆ ಯಾತ್ರಾರ್ಥಿಗಳಿಗೆ ಶುಭ ಸುದ್ದಿ